ಸಾತೋಡಿ ಜಲಪಾತದ ಚೆಲುವ ನೋಡಿ

ಸಾತೋಡಿ ಜಲಪಾತದ ಚೆಲುವ ನೋಡಿ

ಸಾತೋಡಿ ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿರುವ 1 ಜಲಪಾತ. ಇ  ಶಿರಸಿಯಿಂದ 73 ಕಿಲೋಮೀಟರ್ ದೂರದಲ್ಲಿದೆ. ಯಲ್ಲಾಪುರದಿಂದ ಸುಮಾರು 32 ಕಿ.ಮೀ. ದೂರದಲ್ಲಿದೆ. ಈ ಜಲಪಾತವು ದಾಂಡೇಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುವುದಲ್ಲದೆ ದಟ್ಟ ಕಾನನದ ನಡುವೆ ಸೇರಿಕೊಂಡಿದೆ. ಹಲವಾರು ಝರಿಗಳಿಂದ ಸೇರಿದ ನೀರು ಸುಮಾರು 15 ಮೀಟರ್ ಎತ್ತರದಿಂದ ಧುಮುಕುತ್ತದೆ. ವರ್ಷವಿಡೀ ತನ್ನ ವೈಯಾರದಿಂದ ಪ್ರವಾಸಿಗರ ಮನ ಗೆಲ್ಲುವ ಸಾತೋಡಿ ಜಲಪಾತವನ್ನು ಮಳೆಗಾಲದ ವೇಳೆ ನೋಡಲು 2 ಕಣ್ಣು ಸಾಲದು. ಈ ಜಲಪಾತವು ಕಾಳಿ ಉಪನದಿಯಾದ ಸೊರಬ್ಬಿ ಹಳ್ಳದಿಂದ ಉಗಮವಾಗಿದೆ. ಸುಮಾರು 50 ಅಡಿ ಎತ್ತರದಿಂದ ವಿಶಾಲವಾಗಿ ಕೆಳಗೆ ಬೀಳುತ್ತಾ ಝೇಂಕಾರ ಮಾಡಿ ನದಿ ಸೇರುತ್ತದೆ.ದಾಂಡೇಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುವ ಸಾತೋಡಿ ಜಲಪಾತ ದಟ್ಟಕಾನನದ ನಡುವೆ ಸೇರಿಕೊಂಡಿದೆ. ಅಗಲವಾಗಿ ಮತ್ತು ವಿಸ್ತಾರವಾಗಿ ಹರಿಯುವ ಝರಿಯು ನಂತರ ಕೊಡನಳ್ಳಿ ಜಲಾಶಯದ ಮೂಲಕ ಕಾಳಿ ನದಿಯನ್ನು ಸೇರುತ್ತದೆ. ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಅರಣ್ಯ ಇಲಾಖೆಯ ಅನುಮತಿ ಪತ್ರ ಪಡೆದು ಸುಮಾರು 2 ಕಿ.ಮೀ ಕಚ್ಚಾ ರಸ್ತೆಯಲ್ಲಿ ನಡೆದು ಸಾಗಿದರೆ ಪ್ರವಾಸಿಗರಿಗೆ ಜಲಪಾತದ ಸೌಂದರ್ಯ ಕಾಣುತ್ತದೆ. ಸಾತೋಡಿಗೆ ಅನೇಕ ಕಡೆಗಳಿಂದ ಪ್ರವಾಸಿಗರು ಬಂದು ಹೋಗಿದ್ದಾರೆ. ವಿದೇಶಿಯರೂ ಕಣ್ತುಂಬಿಸಿಕೊಂಡಿದ್ದಾರೆ.ಸಾತೋಡಿ ಜಲಪಾತವನ್ನು ಕಂಡವರು ಇದನ್ನು ಚಿಕ್ಕ ನಯಾಗರ ಜಲಪಾತಕ್ಕೆ ಹೋಲಿಸಿದ್ದುಂಟು. ನಿತ್ಯ ಹರಿದ್ವರ್ಣದ ಕಾಡುಗಳು ಹಾಗು ಮುಗಿಲೆತ್ತರದ ಬೆಟ್ಟಗಳಲ್ಲಿ ಹುಟ್ಟಿಪ್ರಪಾತಕ್ಕೆ ಧುಮುಕುವ ಜಲಧಾರೆ ನಿಧಾನವಾಗಿ ಪ್ರವಹಿಸುತ್ತಾ ಕಣಿವೆಗಳಲ್ಲಿ ನದಿಯಾಗಿ ಹರಿಯುವ ಪರಿ ಅನನ್ಯ.ಹಾಗೆಯೇ ಜಲಪಾತದ ಹತ್ತಿರ 4 ಕಿ.ಮೀ ಕಾಳಿ ನದಿಯ ಹಿನ್ನೀರಿನ ದಂಡೆಯ ಮೇಲೆ ಕೊರೆವ ಚಳಿಯಲ್ಲಿ ಸಾಗಿದರೆ ಮನಸ್ಸಿಗೆ ಸಿಗುವ ಉಲ್ಲಾಸವೇ ಬೇರೆ. ಹರಿಯುವ ನೀರಿನಲ್ಲಿ ಸ್ನಾನ ಮಾಡುವ ಅನುಭವ ಅದ್ಭುತ. ಭಾರಿ ಗಾತ್ರದ ಹಾಸುಕಲ್ಲಿನ ಮೇಲೆ ಚಿತ್ತಾರ ಮಾಡಿದ್ದಾರೆನ್ನುವಂತಹ ಅನುಭವವಾಗುತ್ತದೆ. ಎಷ್ಟೇ ದೂರದಿಂದ ಬಂದರೂ ಸಾತೋಡಿ ಜಲಪಾತ ಮನಸ್ಸನ್ನು ತಂಪು ಮಾಡುವುದಂತು ನಿಜ.

 

ಫ್ರೆಶ್ ನ್ಯೂಸ್

Latest Posts

Featured Videos