ಶಿಲ್ಪ ಕಲೆ ಉಳಿಸಿ ಬೆಳಸಬೇಕು

ಶಿಲ್ಪ ಕಲೆ ಉಳಿಸಿ ಬೆಳಸಬೇಕು

ದೇವನಹಳ್ಳಿ, ನ. 08: ನಗರದ ಶಿಲ್ಪ ಕಲಾ ಶಾಲೆಯ ಆವರಣದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪ ರತ್ನ ಎ.ಸಿ ಹನುಮಂತ ಚಾರ್ಯರ 95 ನೇ ಜಯಂತೋತ್ಸವ ಅಂಗವಾಗಿ ಗುರುವಂದನಾ ಕಾರ್ಯಕ್ರಮ ನಡೆಯಿತು.

ಶಿಲ್ಪಿ ಹನುಮಂತ ಚಾರ್ಯರರು ದೇವನಹಳ್ಳಿಯಲ್ಲಿ ವಿವಿಧ ದೇವಾಲಯಗಳ ಕೆತ್ತನೆ ಕಾರ್ಯ ಹಾಗೂ ದೇಶಗಳಲ್ಲೂ ಸಹ ದೇವರುಗಳ ವಿಗ್ರಹಗಳನ್ನು ಕೆತ್ತನೆ ಮಾಡಿ ಸ್ಥಾಪಿಸಲಾಗಿದೆ. ದೇವನಹಳ್ಳಿ ಪಾಳೆಗಾರರ ಕಾಲದಿಂದಲೂ ಸಹ ಈ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ. ಮೂಲತಃ ದೇವನಹಳ್ಳಿಯಲ್ಲಿ ಜನಿಸಿದ ಹನುಮಂತ ಚಾರ್ಯರು ಶಿಲ್ಪ ಕೆತ್ತನೆಯ ಪ್ರತಿಭೆಯಿಂದ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿದ್ದರು. ನಂದೀ ಬೆಟ್ಟಕ್ಕೆ ಮಾಜಿ ಪ್ರಧಾನಿ ನೆಹರು ತೆರಳುವ ವೇಳೆ ಶಿಲ್ಪ ಕಲಾ ಶಾಲೆಗೆ ಭೇಟಿ ನೀಡಿದ್ದರು. ಎ.ಸಿ ಹನುಮಂತ ಚಾರ್ಯರ ಗರಡಿಯಲ್ಲಿ ವಿಧ್ಯೆ ಕಲಿತು ನೂರಾರು ಜನರು ನಾಡಿನ ಖ್ಯಾತ ಶಿಲ್ಪಿಗಳಾಗಿ ದೇಶದ ಮೂಲೆ ಮೂಲೆಗಳಲ್ಲಿ ಕಲಾ ಪ್ರತಿಭೆಯ ಮೂಲಕ ಬದುಕು ಕಟ್ಟು ಕೊಂಡಿದ್ದಾರೆ ಎಂದು ಶಿಲ್ಪ ಕಲಾ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಮಧು ಸೂಧನ್ ಹೇಳುತ್ತಾರೆ.

ಶಿಲ್ಪ ಕಲಾ ಶಾಲೆಯ ಸಂಸ್ಥಾಪಕ ಅಧ್ಯಕ್ಷೆ ಸರೋಜಾ ದೇವಿ ಮಾತನಾಡಿ, ಶಿಲ್ಪ ಕಲೆ ಉಳಿಸಿ ಬೆಳಸಬೇಕೆಂಬ ಆಸೆ ಇದೆ. ಈ ನಿಟ್ಟಿನಲ್ಲಿ ಮತ್ತೊಂದು ಶಿಲ್ಪ ಕಲಾ ಶಾಲೆ ಮತ್ತು ಮ್ಯೂಸಿಯಂ ತೆರೆಯುವ ಉದ್ದೇಶವಿದೆ. ಸರ್ಕಾರದಿಂದ ಸಹಾಯ ಸಿಗುತ್ತದೆ ಎಂಬ ಅಪೇಕ್ಷೆ ಇದೆ. ನಮ್ಮ ಹೊಯ್ಸಳ ಶಿಲ್ಪ ಕಲಾ ಕೆತ್ತನೆ ಶೈಲಿ ವಿದೇಶಿಯರು ಬಹಳ ಮೆಚ್ಚುತ್ತಾರೆ. ಆ ಕಾರಣ ಅವರು ನಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಮುಂದಿನ ವರ್ಷದಿಂದ ಅವರ ಹೆಸರಿನಲ್ಲಿ 2 ಶಿಲ್ಪ ಕಲಾವಿಧರಿಗೆ ಶಿಷ್ಯ ವೇತನ ನೀಡಲಾಗುವುದು.  ಕಲಾವಿಧರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.

ಈ ವೇಳೆಯಲ್ಲಿ ಜಿಲ್ಲಾ ವಿಎಚ್ ಪಿ ಅಧ್ಯಕ್ಷ ರಂಗಸ್ವಾಮಿ, ನಗರ್ತ ಸಂಘದ ಅಧ್ಯಕ್ಷ ಎಸ್ ರಮೇಶ್ ಕುಮಾರ್, ಶಿಲ್ಪ ಕಲಾ ಶಾಲೆಯ ಅಧ್ಯಕ್ಷ ಶಂಕರ್ ನಾರಾಯಣ್, ಹಾಗೂ ಪದಾಧಿಕಾರಿಗಳು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos