ರಂಜಾನ್​ ನಿಮಿತ್ತ ಚಿಕನ್‌, ಮಟನ್ ಹರೀಸ್​ಗೆ ಹೆಚ್ಚಿದ ಬೇಡಿಕೆ

ರಂಜಾನ್​ ನಿಮಿತ್ತ ಚಿಕನ್‌, ಮಟನ್ ಹರೀಸ್​ಗೆ ಹೆಚ್ಚಿದ ಬೇಡಿಕೆ

ಕಲಬುರಗಿ, ಮೇ.30, ನ್ಯೂಸ್ ಎಕ್ಸ್ ಪ್ರೆಸ್: ಮುಸ್ಲೀಂ ಸಮುದಾಯದ ಪವಿತ್ರ ಹಬ್ಬ ರಂಜಾನ್. ಒಂದು ತಿಂಗಳ ಕಾಲ ನಿಯಮ ನಿಷ್ಠೆಯಿಂದ ಉಪವಾಸ ಮಾಡುವ ಧರ್ಮೀಯರು ಹನಿ ನೀರು ಸೇವಿಸದೇ ದಿನಪೂರ್ತಿ ಉಪವಾಸದ ಮೂಲಕ ರಂಜಾನ್ ಆಚರಣೆ ಮಾಡುತ್ತಾರೆ. ಹಬ್ಬದ ಹಿನ್ನೆಲೆಯಲ್ಲಿ ಇದೀಗ ಚಿಕನ್‌, ಮಟನ್ ಹರೀಸ್​ಗೆ ಬೇಡಿಕೆ ಹೆಚ್ಚಿದ್ದು, ಗ್ರಾಹಕರು ಮುಗಿಬೀಳುತ್ತಿದ್ದಾರೆ.

ಬಾಯಲ್ಲಿ ನೀರು ತರಿಸುವ ಚಿಕನ್, ಮಟನ್ ಹರೀಸ್ ಒಂದೆಡೆಯಾದರೆ, ಇನ್ನೊಂದಡೆ ಪಕೋಡಾ, ಸಮೋಸಾ, ಮತ್ತೊಂದೆಡೆ ಕದ್ದುಕಾ ಖೀರ್, ರುಚಿ ಬರಿತವಾದ ಸಿಹಿ ಪದಾರ್ಥಗಳು. ಹೀಗೆ ರುಚಿರುಚಿಯಾದ ಆಹಾರ ಪದಾರ್ಥಗಳು ಕಲಬುರಗಿಯ ಮುಸ್ಲಿಂ ಚೌಕ್‌ನಲ್ಲಿರುವ ಪ್ರಸಿದ್ಧ ಚಾಚಾ ಹೋಟೆಲ್​ನಲ್ಲಿ ಜನರನ್ನು ಕೈಬಿಸಿ ಕರೆಯುತ್ತಿವೆ.

ರಂಜಾನ್‌ ಹಬ್ಬದ, ಈ ಸಂದರ್ಭದಲ್ಲಿ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಇದ್ದರೂ, ಹನಿ ನೀರು ಸೇವಿಸದೆ ಬೆಳಗ್ಗಿನಿಂದ ಸಂಜೆಯವರೆಗೆ ಉಪವಾಸ ಮಾಡಲಾಗುತ್ತಿದೆ. ದಿನಪೂರ್ತಿ ಉಪವಾಸವಿದ್ದು,ಸಂಜೆ ಖಾಲಿ ಹೊಟ್ಟೆಗೆ ಊಟ ಮಾಡಿದ್ರೆ ತೊಂದರೆ ಆಗುತ್ತೆ ಅನ್ನೋ ಕಾರಣಕ್ಕೆ ಉಪವಾಸ ತ್ಯಜಿಸಿದ ನಂತರ ಹಣ್ಣು ಹಂಪಲು, ಆಹಾರದ ಸಮತೋಲನ ಕಾಪಾಡಿಕೊಳ್ಳುವ ಹರೀಸ್ ತಿಂಡಿ ಸಹ ಸೇವಿಸುತ್ತಾರೆ. ಹಲವು ಕಾಳು, ಹಿಟ್ಟು, ಚಿಕನ್ ಅಥವಾ ಮಟನ್ ಹದವಾಗಿ ಮಾಡಿ ಹರೀಸ್ ತಯಾರಿಸಲಾಗುತ್ತದೆ. ಇದರಲ್ಲಿ ಪೌಷ್ಠಿಕಾಂಶ ಕೂಡ ಹೆಚ್ಚಾಗಿರುವದರಿಂದ ಉಪವಾಸ ಮಾಡುವವರು ಇದನ್ನು ಸೇವಿಸುತ್ತಾರೆ.

ಎಂ.ಎ ಜಬ್ಬಾರ ಹೊಟೇಲ್ ಚಾಚಾ ಹೊಟೇಲ್ ಎಂದೇ ಪ್ರಸಿದ್ಧಿಯಾಗಿದೆ. ಕಳೆದ 30 ವರ್ಷಗಳಿಂದ ಪ್ರತಿ ರಂಜಾನ್​ಗೆ ಹರೀಸ್ ಹಾಗೂ ಸಿಹಿ ಪದಾರ್ಥ ಮಾಡಲೆಂದೇ ಹೈದ್ರಾಬಾದ್​ನಿಂದ ಉಸ್ತಾದ್​ಗಳನ್ನು ಕರೆಸಲಾಗುತ್ತದೆ. ಒಂದು ತಿಂಗಳು ಉಸ್ತಾದ್​ಗಳು ತಮ್ಮ ಕೈ ರುಚಿಯನ್ನು ಜನರಿಗೆ ಊಣ ಬಡಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos