ರೈಲ್ವೆ ಕಮಿಟಿ ವಿವಿಧ ರೈಲ್ವೆ ನಿಲ್ದಾಣಗಳನ್ನು ಭೇಟಿ

ರೈಲ್ವೆ ಕಮಿಟಿ ವಿವಿಧ ರೈಲ್ವೆ ನಿಲ್ದಾಣಗಳನ್ನು ಭೇಟಿ

ಕೆ.ಆರ್.ಪುರ, ಫೆ. 26: ಕೇಂದ್ರ ಸರ್ಕಾರ ಪ್ರಯಾಣಿಕರ ಸೌಲಭ್ಯಕ್ಕೆ ಹೆಚ್ಚು ಒತ್ತು ನೀಡಿತ್ತಿದ್ದು ಅದರ ಸೂಚನೆ ಮೇರೆಗೆ ಬೆಂಗಳೂರಿನ ವಿವಿಧ ರೈಲ್ವೆ ನಿಲ್ದಾಣಗಳನ್ನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದು ರೈಲ್ವೆ ಪ್ರಯಾಣಿಕರ ಸೌಲಭ್ಯ ಕಮಿಟಿ ಅಧ್ಯಕ್ಷ ಕೃಷ್ಣದಾಸ್ ಹೇಳಿದರು.

ಕೃಷ್ಣರಾಜಪುರ ಸುತ್ತಮುತ್ತಲಿನ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆ ಹಾಗೂ ಸ್ಥಿತಿಗತಿಗಳ ಪರಿಶೀಲನೆ ನಡೆಸಿ ನಂತರ ಮಾತನಾಡಿದರು. ಬೆಂಗಳೂರಿನ ಮೆಜೆಸ್ಟಿಕ್, ಯಶವಂತಪುರ, ಬೆಂಗಳೂರು ಪೂರ್ವ ಕೃಷ್ಣರಾಜಪುರ, ಬಾನಸವಾಡಿ ರೈಲ್ವೆ ನಿಲ್ದಾಣಗಳಿಗೆ ಬೇಟಿ ನೀಡಿದ ವೇಳೆ ಸಣ್ಣಪುಟ್ಟ ಸಮಸ್ಯೆಗಳು ಗಮನಕ್ಕೆ ಬಂದಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಗಳನ್ನು ಬಗೆಹರಿಸಲು ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ನಂತರ ರೈಲ್ವೆ ಬೋರ್ಡ್ ಸದಸ್ಯ ಮಧುಸೂದನ್ ಮಾತನಾಡಿ, ಪ್ರಯಾಣಿಕರ ಸೌಲಭ್ಯ ಕಮಿಟಿ ತಂಡವು ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧ ರೈಲ್ವೆ ನಿಲ್ದಾಣಗಳಿಗೆ ಬೇಟಿ ನೀಡಿ ಪ್ರಯಾಣಿಕರ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ್ದೇವೆ ಎಂದರು. ಕುಡಿಯುವ ನೀರು, ಶೌಚಾಲಯ, ಪ್ಲಾಟ್ ಪಾಮ್ ಸೇರಿದಂತೆ ಇತರೆ ಮೂಲ ಸೌಕರ್ಯಗಳ ಪರಿಶೀಲನೆ ಮಾಡಿದ್ದೇವೆ ಎಂದು ತಿಳಿಸಿದರು.

ಕೃಷ್ಣರಾಜಪುರ ರೈಲು ನಿಲ್ದಾಣ ಸಮೀಪವಿರುವ ವಿಜಿನಾಪುರ ವಾರ್ಡ್ ಎ.ಬ್ಲಾಕ್ ಕಡೆಯಿಂದ ಬೆನ್ನಿಗಾನಹಳ್ಳಿ ಕೆರೆ ಹಾಗೂ ಪೈಲೇಔಟ್ ಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಬ್ರಿಟಿಷ್‌ ರ ಕಾಲದಲ್ಲಿ ನಿರ್ಮಾಣ ವಾಗಿದ್ದು, ರೈಲ್ವೆ ಟ್ರಾಕ್ ರಾಜಕಾಲುವೆ ದುರಸ್ತಿಗೆ ರೈಲ್ವೆ ಅಧಿಕಾರಿಗಳು ತಡೆಯೊಡ್ಡುತ್ತಿದ್ದರು ರೈಲ್ವೆ ಅಧಿಕಾರಿಗಳು ಅಡ್ಡಿಪಡಿಸುತ್ತಿರುವ ಕುರಿತು ಸ್ಥಳೀಯ ಪಾಲಿಕೆ ಸದಸ್ಯ ಬಂಡೆ ರಾಜು ದೂರು ನೀಡಿದ್ದು ಸಮಸ್ಯೆ ಬಗಪಸುವುದಕ್ಕೆ ಸ್ಥಳದಲ್ಲಿಯೇ ಅನುಮತಿ ನೀಡಲಾಗಿದೆ ಎಂದರು.

ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆ ರೈಲ್ವೆ ಹಳಿ ಮೇಲೆ ಹಾದು ಹೋಗಿರುವ ಪಾದಚಾರಿ ಸೇತುವೆ ಇಕ್ಕಟ್ಟಾಗುತ್ತಿದ್ದು, ಮತ್ತೊಂದು ಪಾದಚಾರಿ ಸೇತುವೆ ನಿರ್ಮಾಣಕ್ಕೆ ಚಿಂತನೆ ಮಾಡಲಾಗಿದೆ ಎಂದರು.

ಶೌಚಾಲಯಗಳನ್ನು ಅಭಿವೃದ್ಧಿ ಮಾಡಿ ಮೇಲ್ ದರ್ಜೆಗೆ ಏರಿಸಲಾಗುವುದು, ಕೆ.ಆರ್ ಪುರ ರೈಲ್ವೆ ನಿಲ್ದಾಣದಲ್ಲಿ 12 ಫ್ಯಾನ್ ಗಳು ಕಳ್ಳತನವಾಗಿದ್ದು,  ಮುಂದಿನ ದಿನಗಳಲ್ಲಿ ಸಿಸಿ ಟಿವಿ ಅಳವಡಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈಲ್ವೇ ಬೋರ್ಡ್ ಸದಸ್ಯರಾದ ಕಲ್ಕೆರೆ ಮಧುಸೂದನ್,  ಪ್ರೇಮಿಂದರ್ ರೆಡ್ಡಿ, ರವೀಂದ್ರ, ವಿಜಯಲಕ್ಷ್ಮಿ, ಪಾಲಿಕೆ ಸದಸ್ಯ ಬಂಡೆರಾಜು ಹಾಗೂ ಇತರೆ ರೈಲ್ವೆ ಅಧಿಕಾರಿಗಳು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos