ಚಿಂದಿ ಆಯುವ ಗರ್ಭಿಣಿಗೆ ಹಿಗ್ಗಾಮುಗ್ಗ

ಚಿಂದಿ ಆಯುವ ಗರ್ಭಿಣಿಗೆ ಹಿಗ್ಗಾಮುಗ್ಗ

ಬಾಗಲಕೋಟೆ, ಡಿ. 10 : ಚಿಂದಿ ಆಯುವ ಇಬ್ಬರು ಮಹಿಳೆಯರಿಗೆ ಯುವಕರು ಹಿಗ್ಗಾಮುಗ್ಗಾ ಥಳಿಸಿರುವ ಜಿಲ್ಲೆಯ ಜಮಖಂಡಿಯಲ್ಲಿ ಈ ಘಟನೆ ನಡೆದಿದೆ. ಚಿಂದಿ ಆಯುವ ಮಹಿಳೆಯರ ಮೇಲೆ ದುಷ್ಕರ್ಮಿಗಳು ಪ್ರತಾಪ ತೋರಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಚಿಂದಿ ಆಯ್ದುಕೊಂಡು ಹೋಗುತ್ತಿದ್ದ ಮಹಿಳೆಯರಿಗೆ ಕೆಲ ಯುವಕರು ಮನಬಂದಂತೆ ಥಳಿಸಿದ್ದಾರೆ. ಕಳ್ಳತನ ಮಾಡೋದಕ್ಕೆ ಇಲ್ಲಿಗೆ ಬಂದಿದ್ದೀರಾ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆಯರ ಮೇಲೆ ಹಲ್ಲೆ ಮಾಡಲಾಗಿದೆ.
ಗರ್ಭಿಣಿಯಿದ್ದಾಳೆ ದಯವಿಟ್ಟು ಹೊಡಿಬೇಡಿ ಎಂದು ಮಹಿಳೆ ಕೈ ಮುಗಿದು ಕೇಳಿದರೂ ಪಾಪಿಗಳು ಕರುಣೆ ತೋರದೆ ಥಳಿಸಿದ್ದಾರೆ. ಹೊಟ್ಟೆಪಾಡಿಗೆ ಹೀಗೆ ಮಾಡಿದೆವು ತಪ್ಪಾಯ್ತು ಬಿಟ್ಟುಬಿಡಿ ಎಂದು ಬೇಡಿಕೊಂಡರೂ ದುಷ್ಕರ್ಮಿಗಳು ಥಳಿಸಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos