ಪುಲ್ವಾಮಾ ದಾಳಿ: ಸ್ಫೋಟಕ್ಕೆ ಬಳಸಿದ ಕಾರು ಪತ್ತೆ

ಪುಲ್ವಾಮಾ ದಾಳಿ: ಸ್ಫೋಟಕ್ಕೆ ಬಳಸಿದ ಕಾರು ಪತ್ತೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ
ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಬಳಸಿದ್ದು ಮಾರುತಿ ಸುಜುಕಿಯ ಕೆಂಪು
ಬಣ್ಣದ ಈಕೋ ಕಾರ್ ಎಂಬುದು
ತಿಳಿದು ಬಂದಿದೆ.

ದಾಳಿಗೆ
ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳಕ್ಕೆ ಸಿಸಿಟಿವಿ
ಕ್ಯಾಮರಾ ಫೂಟೇಜ್ ಲಭ್ಯವಾಗಿದ್ದು, ಸಿಆರ್
ಪಿಎಫ್ ವಾಹನಕ್ಕೆ ಡಿಕ್ಕಿಹೊಡೆಯುವ ಮೊದಲು ಆತ್ಮಾಹುತಿ ದಾಳಿಕೋರ
ಇದ್ದ ಕಾರಿನ ವಿಡಿಯೋ ಈ
ಫೂಟೇಜ್ ನಲ್ಲಿ ಸಿಕ್ಕಿದೆ.

ಕೆಂಪು ಬಣ್ಣದ
ಈಕೋ ಕಾರ್ ನಲ್ಲಿ ಆತ್ಮಾಹುತಿ
ದಾಳಿಕೋರ, ಜೈಷ್ ಇ ಮೊಹಮ್ಮದ್
ಉಗ್ರ ಸಂಘಟನೆಯ ಆದಿಲ್ ದಾರ್
ತಾನೇ ಕಾರನ್ನು ಡ್ರೈವ್ ಮಾಡಿಕೊಂಡು
ಹೋಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.

ಸ್ಫೋಟಕ್ಕೆ
ಬಳಸಿದ ಈ ಕಾರು 2010-11ರ
ಮಾಡೆಲ್ ದು, ಅದಕ್ಕೆ ಹೊಸದಾಗಿ
ಫೈಂಟ್ ಮಾಡಿಸಲಾಗಿತ್ತು ಎನ್ನಲಾಗಿದೆ.

ಪ್ರತ್ಯಕ್ಷದರ್ಶಿಗಳೂ
ಘಟನೆಯ ಬಗ್ಗೆ ಮಾಹಿತಿ ನೀಡಿ,
ಕೆಂಪು ಬಣ್ಣದ ಈಕೋ ಕಾರ್
ನಲ್ಲಿ ಬಂದಿದ್ದ ವ್ಯಕ್ತಿವು ಹಲವಾರು
ಬಾರಿ ಇದೇ ರಸ್ತೆಯಲ್ಲಿ ಕಾರಿನಲ್ಲಿ
ಒಡಾಡುತ್ತಿದ್ದ. ನಂತರ ರಸ್ತೆಯಲ್ಲಿ ಎಡ,
ಬಲ ನೋಡದೆ ಚಿತ್ರ ವಿಚಿತ್ರವಾಗಿ
ಕಾರು ಓಡಿಸುತ್ತಿದ್ದ, ನಂತರ ಹೋಗಿ ಸಿಆರ್
ಪಿಎಫ್ ಯೋಧರ ವಾಹನಕ್ಕೆ ಡಿಕ್ಕಿ
ಹೂಡೆಸಿದ್ದು ಸಿಸಿಟಿವಿ ಕ್ಯಾಮರಾ ಫೂಟೇಜ್ ನಲ್ಲಿ
ಲಭ್ಯವಾಗಿದೆ ಎಂದು ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos