ಬೇಲೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ಬೇಲೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ಬೇಲೂರು, ನ. 19: ಭಾರತದ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಒಬ್ಬರೆ ಬರೆದಿಲ್ಲ ಎಂದು ಕೈಪಿಡಿ ಮುದ್ರಿಸಿ ಹಂಚಿ ಸಮಾಜದಲ್ಲಿ ಸತ್ಯವನ್ನು ತಿರುಚಲು ರಾಜ್ಯ ಬಿಜೆಪಿ ಸರಕಾರ ಮುಂದಾಗಿದೆ ಎಂದು ಆರೋಪಿಸಿ ಇಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೊರಟ ಮೆರವಣಿಗೆಯಲ್ಲಿ ಬಿಜೆಪಿ ಸರಕಾರ ಹಾಗೂ ಶಿಕ್ಷಣ ಸಚಿವ ಸುರೇಶಕುಮಾರ್ ವಿರುದ್ಧ ದಿಕ್ಕಾರ ಕೂಗಿದರು. ಆನಂತರ ಬಸವೇಶ್ವರ ವೃತ್ತದಲ್ಲಿ ರಸ್ತೆತಡೆ ನಡೆಸಿದ ಪ್ರತಿಭಟನಕಾರರು ಉಮಾಶಂಕರ್ ಪ್ರತಿಕೃತಿ ದಹಿಸಿ ಘೋಷಣೆ ಕೂಗಿದರು.

ಈ ಸಂದರ್ಭ ಮಾತನಾಡಿದ ಒಕ್ಕೂಟದ ಪ್ರಮುಖ ಮರಿಯಪ್ಪ ಮಾತನಾಡಿ, ಡಾ.ಅಂಬೇಡ್ಕರ್ ಅವರು ಸಂವಿಧಾನವನ್ನು ಒಬ್ಬರೆ ಬರೆದಿಲ್ಲ ಎಂದು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುವ ಹಾಗೂ ಗೊಂದಲಕ್ಕೆ ಕಾರಣ ಆಗಿರುವ ಶಿಕ್ಷಣ ಇಲಾಖೆ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ರಾಜ್ಯ ಬಿಎಸ್‍ಪಿ ಕಾರ್ಯದರ್ಶಿ ಗಂಗಾಧರಬಹಜನ್ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ಸಂವಿಧಾನವನ್ನು ರದ್ದುಪಡಿಸಿ ಮತ್ತೊಮ್ಮೆ ಮನುಕುಲವಾದಿಗಳ ಆಡಳಿತ ತರಲು ಇಂತಹ ನೀಚಕೃತ್ಯಕ್ಕೆ ಕೈಹಾಕುತ್ತಿದೆ. ತಾನು ಮಾಡಲಾಗದ ಕೆಲವೊಂದು ಕೆಟ್ಟ ಕೆಲಸವನ್ನು ಅಧಿಕಾರಿಗಳ ಮೂಲಕ ಮಾಡಿಸುತ್ತಿದೆ. ಮೀಸಲಾತಿಯನ್ನು ತೆಗೆದುಹಾಕುವ ಷಡ್ಯಂತ್ರ ಇದಾಗಿದೆ.

ಟಿಪ್ಪು ಸುಲ್ತಾನನ ಉತ್ತಮ ಆಡಳಿತವನ್ನು ಸಹಿಸದೆ ಆತನ ಚರಿತ್ರೆಯನ್ನು ಪಠ್ಯದಿಂದ ತೆಗೆದುಹಾಕುವಂತೆ ನೀಚಕೆಲಸಕ್ಕೆ ಬಿಜೆಪಿ ಕೈಹಾಕಿರುವುದು ಖಂಡನೀಯ ಎಂದರು. ಈ ಎಲ್ಲಾ ಘಟನೆಯ ನೈತಿಕ ಹೊಣೆಹೊತ್ತು ಬಿಜೆಪಿ ಸರಕಾರ ರಾಜೀನಾಮೆ ನೀಡಬೇಕು, ಸಂಪುಟದಿಂದ ಶಿಕ್ಷಣ ಸಚಿವ ಸುರೇಶಕುಮಾರ್ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.

ತಾ.ಪಂ.ಸದಸ್ಯ ಮಂಜುನಾಥ್ ಮಾತನಾಡಿ, ಭಾರತದ ಅಖಂಡತೆ ಹಾಗೂ ಸೋದರತೆ ಸಮಗ್ರತೆ ಇರುವ ಭಾರತದ ಸಂವಿಧಾನವನ್ನು ಡಾ.ಅಂಬೇಡ್ಕರ್ ಅವರು ಒಬ್ಬರೆ ಬರೆದಿಲ್ಲ ಎನ್ನುವುದು ಎಷ್ಟು ಸರಿ. ಸಂ ವಿಧಾನ ದಿನವನ್ನು ಆಚರಿಸುವ ನವೆಂಬರ್ 26 ದಿನದ ಕಾರ್ಯಕ್ರಮ ಕುರಿತು ಪ್ರಕಟಿಸಿದ ಕೈಪಿಡಿಯಲ್ಲಿ ಅಂಬೇಡ್ಕರ್ ಒಬ್ಬರೆ ಸಂವಿಧಾನ ಬರೆದಿಲ್ಲ ಎಂದು ಮುದ್ರಿಸಿ ತಪ್ಪು ಮಾಹಿತಿ ರವಾನಿಸಲಾಗಿದೆ. ಇದು ಅಂಬೇಡ್ಕರ್ ಅವರನ್ನು ಅವಮಾನಿಸುವ ಒಂದೆ ಉದ್ದೇಶವಾಗಿದೆ ಎಂದು ದೂರಿದರು.

ಹಗರೆ ಈಶ್ವರಪ್ರಸಾದ್ ಮಾತನಾಡಿ, ಡಾ.ಅಂಬೇಡ್ಕರ್ ಅವರ ವಿರುದ್ಧ ಇದೆ ರೀತಿ ಅವಹೇಳನ ಮಾಡುವುದು ಮುಂದುವರಿದಿದ್ದೆ ಆದಲ್ಲಿ ನಾವು ಟಿಪ್ಪುವಿನ ಖಡ್ಗ ಹಿಡಿಯಬೇಕಾದೀತೆಂದು ಎಚ್ಚರಿಸಿದರು. ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲ

ಕ ಬಿ.ಎಲ್.ಲಕ್ಷ್ಮಣ್, ಪುರಸಭ ಮಾಜಿ ಸದಸ್ಯ ಮಂಜುನಾಥ್, ಶಶಿಧರಮೌರ್ಯ, ಗ್ರಾ.ಪಂ.ಸದಸ್ಯ ಬಾಬು ಮಾತನಾಡಿದರು,

ಪ್ರಮುಖರಾದ ದಾಸಪ್ಪ, ತಾ.ಪಂ.ಸದಸ್ಯ ರವಿ, ಹೊಸಹಳ್ಳಿರಾಜು, ರಾಮೇನಹಳ್ಳಿ ಪರ್ವತ, ಇತರರು ಮಾತನಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos