ಸ್ಥಬ್ಧ ಚಿತ್ರದ ಪೋಸ್ಟರ್ ರಿಲೀಸ್

ಸ್ಥಬ್ಧ ಚಿತ್ರದ ಪೋಸ್ಟರ್ ರಿಲೀಸ್

ಬೆಂಗಳೂರು: ಯುವ ಮುಖಂಡ, ನಟರಾದ ಪ್ರತಾಪ್ ರೆಡ್ಡಿ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ತಮ್ಮ 2ನೇ ಚಿತ್ರವಾದ ಸ್ಥಬ್ಧ ಚಿತ್ರದ ಪೋಸ್ಟರ್ ಸೋಮವಾರ ಬಿಡುಗಡೆ ಮಾಡಲಾಯಿತು.
ಈ ವೇಳೆ ಯುವ ನಟ ಪ್ರತಾಪ್ ರೆಡ್ಡಿ ಮಾತನಾಡಿ, ನಾನು ಇಷ್ಟು ಬೆಳೆವಣಿಗೆ ಕಾಣಲು ನನ್ನ ಸ್ನೇಹಿತರು ಕಾರಣ. ಎಲ್ಲರಿಗೂ ನಾನು ಈ ಮೂಲಕ ಧನ್ಯವಾದ ತಿಳಿಸುತ್ತೇನೆ ಎಂದರು.
ನನಗೆ ಬೆಂಬಲ ನೀಡಿದ ರಮೇಶಣ್ಣ, ಧೀರಜ್ ಅಣ್ಣ, ನಮ್ಮ ಮಾವ ಶಂಕರ ರೆಡ್ಡಿ, ವೆಂಕಟರೆಡ್ಡಿ, ನಮ್ಮ ಚಿತ್ರದ ನಿರ್ದೇಶಕ ವಿಜಯ ರಾಘವ ರೆಡ್ಡಿ, ನಮ್ಮ ಗುರುಗಳಾದ ಮಲ್ಲೇಶ್ ಎಲ್ಲರಿಗೂ ಧನ್ಯವಾದ ತಿಳಿಸಿದರು.
ಇದೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದ ಸ್ಥಬ್ಧ ಚಿತ್ರದ ನಿರ್ದೇಶಕ ವಿಜಯ್ ರಾಘವ್ ರೆಡ್ಡಿ ಮಾತನಾಡಿ, ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಪ್ರತಾಪ್ ರೆಡ್ಡಿ ಅವರಿಗೆ ಶುಭವಾಗಲಿ, ಅವರ ಸ್ಥಬ್ಧ ಚಿತ್ರ ಯಶಸ್ವಿ ಕಾಣಲಿ ಎಂದು ಹಾರೈಸುತ್ತೇನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos