ಪಿಲಿಕುಳದ ಹುಲಿ ಐದು ಮರಿಗಳಿಗೆ ಜನ್ಮ

ಪಿಲಿಕುಳದ ಹುಲಿ ಐದು ಮರಿಗಳಿಗೆ ಜನ್ಮ

ಮಂಗಳೂರು, ನ.22 : ಒಂದು ಹೆಣ್ಣು ನಾಲ್ಕು ಗಂಡು ಮರಿಗಳಿಗೆ ಹುಲಿ ಜನ್ಮ ನೀಡಿದೆ. ಹೆಣ್ಣು ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದ್ದು, 13 ಇದ್ದ ಹುಲಿಗಳ ಸಂಖ್ಯೆ ಈಗ 18 ಕ್ಕೇರಿದ್ದು, ಪುಟಾಣಿ ಮರಿಗಳು ತಾಯಿ ಹುಲಿ ರಾಣಿಯ ಜೊತೆ ಆಟವಾಡುತ್ತಾ ಕೃತಕ ಕಾಡಿನಲ್ಲಿ ಅಡ್ಡಾಡುತ್ತಿರುವುದು ಸಾರ್ವಜನಿಕರ ಗಮನ ಸೆಳೆದಿದೆ
ಈಗ ನಾಲ್ಕು ಗಂಡು ಮತ್ತು ಒಂದು ಹೆಣ್ಣು ಮರಿಯಾಗಿದ್ದು ಪಿಲಿಕುಳದಲ್ಲಿ ಹೊಸ ಸಂಭ್ರಮ ಮನೆಮಾಡಿದೆ. ಪಿಲಿಕುಳದಲ್ಲಿ ಹೆಚ್ಚಿನ ಪ್ರಾಣಿಗಳನ್ನು ವಿವಿಧ ಕಂಪನಿಗಳು ದತ್ತು ಪಡೆದಿದ್ದು ಅವುಗಳ ಸಂರಕ್ಷಣೆಯ ಹೊಣೆ ಹೊತ್ತುಕೊಂಡಿದೆ. ಹೀಗಾಗಿ ವಿವಿಧ ರೀತಿಯ ಅಪರೂಪದ ಕಾಡು ಪ್ರಾಣಿಗಳನ್ನು ಪಿಲಿಕುಳದಲ್ಲಿ ಸಂರಕ್ಷಿಸಲಾಗಿದ್ದು ಸಂತತಿ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos