ಬ್ರೈಟ್ ಕಿಡ್ಸ್ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ

ಬ್ರೈಟ್ ಕಿಡ್ಸ್ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ

ಬಾಗೇಪಲ್ಲಿ, ಡಿ. 20: ಪಟ್ಟಣದ ಬ್ರೈಟ್ ಕಿಡ್ಸ್ ಶಾಲೆಯಲ್ಲಿ ಪೋಷಕರ ಮನರಂಜನ್ ಕ್ರೀಡಾಕೂಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತು. ಈ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಸುಮಾರು 150 ಜನ ಪುರುಷರು ಮತ್ತು ಮಹಿಳಾ ಪೋಷಕರು ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆ ಮುಖ್ಯ ಶಿಕ್ಷಕರಾದ ಆರ್, ಸುರೇಶ್ ಬಾಬುರವರು ಮಾತನಾಡಿ, ದೈನಂದಿನ ಯಾಂತ್ರಿಕ ಜೀವನದಿಂದ ಹೊರಬರಲು ಇದೊಂದು ಉತ್ತಮ ಅವಕಾಶ ವಾಗಿದು, ‘ ನಮ್ಮ ನಗು ನಮ್ಮ ಆರೋಗ್ಯ’ ವನ್ನು ವೃದ್ಧಿಸುತ್ತದೆ ಎಂದು ತಿಳಿಸಿದರು.

ನಂತರ ಪೋಷಕರಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಸುಮಾರು ಮಕ್ಕಳಲ್ಲಿ ತಮ್ಮ ಮಕ್ಕಳನ್ನು ಗುರುತ್ತಿಸುವ ಆಟ, ಕೈ ಬಳಸದೇ ಕಡಲೇಪುರಿ ತಿನ್ನುವ ಆಟ, ಬಕೇಟ್ ನಲ್ಲಿ ಚೆಂಡನ್ನು ಎಸೆಯುವ ಆಟ, ಸ್ಟ್ರಾನಿಂದ ಬಟಾನಿಗಳನ್ನು ಎಳೆದುಕೊಂಡು ಮತ್ತೊಂದು ಬಟಲಿಗೆ ಹಾಕುವ ಆಟ, ಹೀಗೆ ಹಲವಾರು ರೀತಿಯ ಹಾಸ್ಯದ ಆಟಗಳನ್ನು ಬ್ರೈಟ್ ಕಿಡ್ಸ್ ಶಾಲೆಯಲ್ಲಿ ಮಕ್ಕಳ ಪೋಷಕರಿಗೆ ಏರ್ಪಡಿಸಿಲಾಗಿತು.

ಈ ಕಾರ್ಯಕ್ರಮದಲ್ಲಿ ಪೋಷಕರಾದ ಓಬಳೇಶ್, ಬಾಬಾಜಾನ್, ವೆಂಕಟೇಶ್, ಸೋಮು, ರಾಜು, ಮಂಜುನಾಥ, ಸೋಮಶೇಖರ್ ಮಹಿಳೆಯರಾದ ಮಂಜುಳ, ನಾಸೀರಾಬಾನು, ನೇತ್ರ, ಮಮತ, ಶಾಲೆಯ ಶಿಕ್ಷಕರಾದ ಎಸ್.ಹರಿತಾ, ಎಲ್. ಅಶ್ವಿನಿ, ಜ್ಯೋತಿ ಮುಂತಾದವರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos