ಏಕದಿನಕ್ಕೂ ಧವನ್ ಡೌಟ್..!

ಏಕದಿನಕ್ಕೂ ಧವನ್ ಡೌಟ್..!

ಮುಂಬೈ, ಡಿ. 10 : ಗಾಯದ ಸಮಸ್ಯೆಯಿಂದಾಗಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಟಿ- ಟ್ವೆಂಟಿ ಸರಣಿಯಿಂದ ಹೊರಬಿದ್ದಿರುವ ಶಿಖರ್ ಧವನ್ ಮುಂದಿನ ಏಕದಿನ ಸರಣಿ ಆಡುವುದು ಅನುಮಾನ ಎನ್ನಲಾಗಿದೆ.
ಸಯ್ಯದ್ ಮುಷ್ತಾಕ್ ಆಲಿ ಟ್ರೋಫಿಯಲ್ಲಿ ಆಡುವಾಗ ಗಾಯಗೊಂಡಿದ್ದ ಎಡಗೈ ಬ್ಯಾಟ್ಸ್ ಶಿಖರ್ ಧವನ್ ವಿಂಡೀಸ್ ವಿರುದ್ಧ ಟಿ ಟ್ವೆಂಟಿ ಸರಣಿಯಿಂದಲೂ ಹೊರಗುಳಿದಿದ್ದಾರೆ.

ಆದರೆ, ವರದಿಯ ಪ್ರಕಾರ ಧವನ್ ಇನ್ನೂ ಫಿಟ್ ಆಗಿಲ್ಲ. ಗಾಯದ ಸಮಸ್ಯೆ ಇನ್ನೂವಾಸಿಯಾಗಿಲ್ಲ. ಹೀಗಾಗಿ ಏಕದಿನ ಸರಣಿಯಿಂದಲೂ ಔಟ್ ಆಗಲಿದ್ದಾರೆ. ಟಿ ಟ್ವೆಂಟಿ ಸರಣಿಗೆ ಧವನ್ ಬದಲು ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದರು. ಆದರೆ ಏಕದಿನ ಸರಣಿಯಿಂದ ಧವನ್ ಹೊರ ಬಿದ್ದಲ್ಲಿ ಮಯಾಂಕ್ ಅಗರ್ವಾಲ್ ಆಯ್ಕೆಯಾಗುವ ಸಾಧ್ಯತೆಯಿದೆ.

ಫ್ರೆಶ್ ನ್ಯೂಸ್

Latest Posts

Featured Videos