ವೈದ್ಯರು, ಸಿಬ್ಬಂದಿಗಳ ನಿರ್ಲಕ್ಷ್ಯ ರೋಗಿ ಸಾವು

ವೈದ್ಯರು, ಸಿಬ್ಬಂದಿಗಳ  ನಿರ್ಲಕ್ಷ್ಯ ರೋಗಿ ಸಾವು

ರಾಮನಗರ : ರೋಗಿಗೆ ಕೋವಿಡ್ ಇಲ್ಲದಿದ್ದರೂ ಇದೆ ಎಂದು ತಪ್ಪು ಮಾಹಿತಿ ನೀಡಿ ಮಹಿಳೆಯೊಬ್ಬರ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಅವರ ಸಂಬಂಧಿಕರು ಜಿಲ್ಲಾ ಕಚೇರಿ ಸಂಕೀರ್ಣದ ಮುಂಭಾಗ ಪ್ರತಿಭಟನೆ ನಡೆಸಿದರು.

ಜಿಲ್ಲಾಸ್ಪತ್ರೆಗೆ ಹೋಗಿ ತಾಯಿಯ ಆರೋಗ್ಯದ ಬಗ್ಗೆ ವಿಚಾರಿಸಿದೆವು. ಆರಂಭದಲ್ಲಿ ತಾಯಿಯ ಕೋವಿಡ್ ವರದಿಯನ್ನು ನೀಡಲು ಅಲ್ಲಿನ ಸಿಬ್ಬಂದಿ ನಿರಾಕರಿಸಿದರು. ನಂತರದಲ್ಲಿ ಒತ್ತಾಯ ಮಾಡಿದಾಗ ಇದೇ ೨೩ರಂದು ಕೋವಿಡ್ ನೆಗೆಟಿವ್ ಎಂದು ವರದಿ ನೀಡಿದರು ಎಂದು ಹೊನ್ನಮ್ಮರ ಪುತ್ರ ಎಚ್. ಸುರೇಶ್ ಮಾಧ್ಯಮಗಳ ಮುಂದೆ ದೂರಿದರು.

೨೪ರಂದು ರಾಜರಾಜೇಶ್ವರಿ ಆಸ್ಪತ್ರೆಯಿಂದ ಕರೆ ಬಂದಿದ್ದು. ನಿಮ್ಮ ತಾಯಿ ತೀರಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಆ ಸಂದರ್ಭದಲ್ಲೂ ತಾಯಿಯ ಕೋವಿಡ್ ಪರೀಕ್ಷೆ ಮಾಡಿದ್ದು, ವರದಿ ನೆಗೆಟಿವ್ ಆಗಿದೆ. ಹೀಗಿದ್ದೂ ರೋಗಿಯನ್ನು ಕೋವಿಡ್ ಸೋಂಕಿತೆ ಎಂದು ಭಾವಿಸಿ ಆಕೆಯನ್ನು ಅದೇ ರೋಗಿಗಳ ಕೋಣೆಯಲ್ಲಿ ಇರಿಸಲಾಗಿತ್ತು.

ಯಾವ ವೈದ್ಯರೂ ಅವರನ್ನು ಪರೀಕ್ಷಿಸಿ ಸೂಕ್ತ ಔಷದೋಪಚಾರ ಮಾಡುವ ಗೋಚಿಗೆ ಹೋಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ನನ್ನ ತಾಯಿ ಮೃತಪಟ್ಟಿದ್ದಾರೆ. ಶವವನ್ನೂ ಕೋವಿಡ್ ಸೋಂಕಿತೆ ಎಂಬಂತೆ ಸುತ್ತಿ ಕೊಟ್ಟಿದ್ದಾರೆ’ ಎಂದು ಆರೋಪಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos