ನರೇಗಾ ಅನುಷ್ಟಾನ ನಿರ್ಲಕ್ಷ್ಯ

ನರೇಗಾ ಅನುಷ್ಟಾನ ನಿರ್ಲಕ್ಷ್ಯ

ಕನಕಪುರ:ನರೇಗಾ ಯೋಜನೆ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ನಿಯಮ ಪಾಲಿಸುವಂತೆ ಸೂಚನೆ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಪ್ಪುಗಳು ಪುನರಾವರ್ತನೆ ಆಗುತ್ತಿವೆ ಎಂದು ಸಾಮಾಜಿಕ ಲೆಕ್ಕ ಪರಿಶೋಧನಾ ಅಧಿಕಾರಿ ಕಮಲಪ್ಪ ಆರೋಪಿಸಿದರು.

ತಾಲ್ಲೂಕಿನ ಮರಳವಾಡಿ ಹೋಬಳಿ ಟಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ೨೦೧೯-೨೦ನೇ ಸಾಲಿನ ಎರಡನೇ ಅವಧಿ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ವರದಿ ಮಂಡಿಸಿ ಮಾತನಾಡಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಉಪಯೋಗಕ್ಕೆ ಬಾರದ ೩೧ ದನದ ಕೊಟ್ಟಿಗೆ ನಿರ್ಮಾಣ ಮಾಡಲಾಗಿದೆ. ಅವುಗಳಲ್ಲಿ ಹಣ ಪಡೆದ ಮೇಲೆ ೩ ಕೊಟ್ಟಿಗೆ  ಒಡೆದು ಹಾಕಲಾಗಿದೆ. ಭಾವಚಿತ್ರವೇ ಇಲ್ಲದ ಅನೇಕ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ದೂರಿದರು.

ಪಂಚಾಯಿತಿಯಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಆಗಿರುವ ಲೋಪದೋಷ ಇನ್ನು ೧೫ ದಿನಗಳ ಒಳಗಾಗಿ ಸರಿಪಡಿಸಿ  ವರದಿ ನೀಡಬೇಕೆಂದು ಸೂಚಿಸಿದರು.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಕುಮಾರ್ ಮಾತನಾಡಿ, ರಾಸುಗಳಿಗೆ ಹರಡಿರುವ ರೋಗ ನಿವಾರಿಸುವತ್ತ ಕ್ರಮ ವಹಿಸಬೇಕಾಗಿದೆ ಎಂದು ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos