ಪಟೇಲ್‌ಗೆ ಗೌರವ ಸಲ್ಲಿಸಿದ ಮೋದಿ

  • In State
  • December 15, 2020
  • 183 Views
ಪಟೇಲ್‌ಗೆ ಗೌರವ ಸಲ್ಲಿಸಿದ ಮೋದಿ

ನವದೆಹಲಿ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುಣ್ಯ ತಿಥಿ ದಿನವಾದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ಅರ್ಪಿಸಿದ್ದಾರೆ. ವಲ್ಲಭಭಾಯ್ ಪಟೇಲ್ ಅವರು ಪ್ರಬಲ ಮತ್ತು ಸಮೃದ್ಧ ಭಾರತಕ್ಕೆ ಅಡಿಪಾಯ ಹಾಕಿದ ‘ಉಕ್ಕಿನ ಮನುಷ್ಯ’ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ತೋರಿಸಿದ ಹಾದಿಯು ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸಲು ಸದಾ ಸ್ಫೂರ್ತಿ ನೀಡುತ್ತದೆ ಎಂದು ಅವರು ಮಂಗಳವಾರ ಟ್ವೀಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos