ಮೆಡಿಕಲ್ ಸ್ಟೋರ್‌ಗಳಿಗೆ ನೀಡದ ನೋಟಿಸ್

  • In State
  • July 3, 2020
  • 254 Views
ಮೆಡಿಕಲ್  ಸ್ಟೋರ್‌ಗಳಿಗೆ ನೀಡದ ನೋಟಿಸ್

ಸಿರವಾರ:ಕೊರೋನಾ ಹಿನ್ನೆಲೆ ಸರ್ಕಾರದ ವೆಬ್ ಸೈಟ್‌ಗೆ ಔಷಧಿಗಳ ವಿವರ ನೀಡದ ಜಿಲ್ಲೆಯ 9 ಮೆಡಿಕಲ್ ಸ್ಟೋರ್ ಮಾಲೀಕರ ವಿರುದ್ಧ ಔಷಧಿ ನಿಯಂತ್ರಣ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿ ಬಿಸಿ ಮುಟ್ಟಿಸಿದ್ದಾರೆ.

ರಾಜ್ಯದಲ್ಲಿ ಕೊರೋನಾ ಆರ್ಭಟ ಹಿನ್ನೆಲೆ ಔಷಧಿ ಅಂಗಡಿಗಳು ಯಾವ ಯಾವ ಔಷಧಿ ಗ್ರಾಹಕರಿಗೆ ವಿತರಿಸುತ್ತಿದ್ದಾರೆಂಬ ಮಾಹಿತಿ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವುದು ಕಡ್ಡಾಯವೆಂಬ ಆದೇಶ ಹೊರಡಿಸಲಾಗಿತ್ತು.

ಆದರೆ ಕೆಲ ಔಷಧ ಅಂಗಡಿಗಳ ಮಾಲೀಕರು ಔಷಧಿಗಳ ವಿವರ ನೀಡದೇ ಸರ್ಕಾರದ ನಿಯಮ ಉಲ್ಲಂಘಿಸಿದ್ದಾರೆ. ಆದೇಶ ಪಾಲನೆಯಲ್ಲಿ ಹಿಂದೇಟು ಹಾಕಿದ ಮೆಡಿಕಲ್ ಸ್ಟೋರ್ ಗಳನ್ನು ಪತ್ತೆಹಚ್ಚಿ ಅಧಿಕಾರಿಗಳು ಅಮಾನತು ಆದೇಶದ ನೋಟಿಸ್ ಜಾರಿ ಮಾಡಿದ್ದಾರೆ.

ಏನಿದು ನಿಯಮ

ಕೋವಿಡ್ 19 ರೆಗ್ಯೂಲೇಶನ್ 2020 ಆಕ್ಟ್ ಪ್ರಕಾರ ಜ್ವರ, ಚಳಿಜ್ವರ, ನೆಗಡಿ, ಕೆಮ್ಮು ಉಸಿರಾಟದ ತೊಂದರೆಯುಳ್ಳ ರೋಗಿಗಳು ಬಂದರೇ ಅವರಿಗೆ ನೀಡುವ ಔಷಧಿಗಳ ಮಾಹಿತಿಯನ್ನು ಕಡ್ಡಾಯವಾಗಿ ಪ್ರತಿದಿನ ಆಪ್‌ಲೋಡ್ ಮಾಡಬೇಕೆಂದು ಜಿಲ್ಲೆಯ ಎಲ್ಲಾ ಮೆಡಿಕಲ್ ಸ್ಟೋರ್ ಗಳಿಗೆ ತಿಳಿಸಲಾಗಿದ್ದು, ಐಡಿ ಹಾಗೂ ಪಾಸ್‌ವರ್ಡ್ಗಳನ್ಮು ಸಹ ನೀಡಲಾಗಿದೆ.

ಅಪ್‌ಲೋಡ್ ಮಾಡುವಲ್ಲಿ ವಿಫಲ:

ಜಿಲ್ಲೆಯ ಕೆಲ ಮೆಡಿಕಲ್ ಶಾಪ್‌ಗಳು ಪ್ರಾಮಾಣಿಕವಾಗಿ ಮಾಹಿತಿಯನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಆದರೆ ಕೆಲ ಪ್ರತಿಷ್ಠಿತ ಔಷಧಿಮಳಿಗೆಗಳು ರೋಗಿಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ ಎಂಬ ಭಯದಿಂದ ಮಾಹಿತಿಯನ್ನು ನಮೂದಿಸುತ್ತಿಲ್ಲ. ಮತ್ತು ಕೆಲವರು ತಮ್ಮ ಪ್ರಭಾವ ಬಳಸಿ ನುಣಿಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಯಾವುದೇ ಪ್ರಭಾವಕ್ಕೆ ಜಗ್ಗದ ಅಧಿಕಾರಿಗಳು ರಾಯಚೂರಿನಲ್ಲಿರುವ 2, ಲಿಂಗಸಗೂರಿನಲ್ಲಿ 3, ಮಾನ್ವಿಯಲ್ಲಿ 2 ಮೆಡಿಕಲ್ ಸ್ಟೋರ್‌ಗಳು ಹಾಗೂ ಸಿರವಾರದ 2 ಔಷಧಿಅಂಗಡಿಗಳನ್ನು ಇಲ್ಲಿಯವರೆಗೆ ಔಷಧ ಮಾಹಿತಿ ಅಪ್ ಲೋಡ್ ಮಾಡದ ಕಾರಣಕ್ಕೆ ಇಲಾಖೆಯಿಂದ ಆಮಾನತು ಆದೇಶ ನೀಡಿದೆ.

ಎಚ್ಚರಿಕೆಯ ಗಂಟೆ

ಇನ್ನು ಮುಂದೆ ಸರಿಯಾದ ಮಾಹಿತಿ ನೀಡದ ಮೆಡಿಕಲ್ ಸ್ಟೋರ್‌ಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡು ಅಮಾನತು ಮಾಡಲಾಗುತ್ತದೆ. ಈಗಾಲಾದರೂ ಔಷಧ ಮಾಲೀಕರು ಎಚ್ಚೆತ್ತುಕೊಂಡು, ಇಲಾಖೆ ನೀಡಿದ ಐಡಿ, ಪಾಸ್‌ವರ್ಡ್ ಬಳಸಿಕೊಂಡು ರೋಗಿಗಳ ಸರಿಯಾದ ಮಾಹಿತಿ ನೀಡಬೇಕು ಎಂದು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos