ದೇಶದಲ್ಲಿ ಮರಣದಂಡನೆ ರದ್ದುಪಡಿಸಬೇಕು.

ದೇಶದಲ್ಲಿ ಮರಣದಂಡನೆ ರದ್ದುಪಡಿಸಬೇಕು.

ನವದೆಹಲಿ, ಜು. 27: ದೇಶದಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸುವ ಸಲುವಾಗಿ ದೇಶದ ಸುಮಾರು ಶೇ.90 ರಷ್ಟು ರಾಜ್ಯಗಳಿಂದ ವಿರೋಧ ವ್ಯಕ್ತವಾಗಿದೆ ಎಂದು ಕೇಂದ್ರ ಸರಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. ಮರಣದಂಡನೆ ಶಿಕ್ಷೆಯನ್ನು ನಿಷೇಧಿಸುವ ಸಂಬಂಧ ರಾಜ್ಯಸಭೆಯಲ್ಲಿ ಖಾಸಗಿ ವಿಧೇಯಕ ಮಂಡಿಸಲಾಗಿದೆ. ಈ ವಿಷಯದ ಕುರಿತು ಚರ್ಚೆ ವೇಳೆ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಜಿ. ಕಿಶನ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಭಯೋತ್ಪಾದನೆ ಮತ್ತು ದೇಶದ ವಿರುದ್ಧ ಯುದ್ಧ ಪ್ರಕರಣಗಳನ್ನು ಹೊರತುಪಡಿಸಿ ಮರಣದಂಡನೆ ಶಿಕ್ಷೆಯನ್ನು ನಿಷೇಧಿಸಬಹುದು ಎಂದು 2015ರ ಆಗಸ್ಟ್ನಲ್ಲಿ ಕಾನೂನು ಆಯೋಗವು ಶಿಫಾರಸು ಮಾಡಿತ್ತು. ಸರಕಾರ ಈ ಸಂಬಂಧ ಎಲ್ಲಾ ರಾಜ್ಯಗಳ ಅಭಿಪ್ರಾಯ ಕೇಳಿತ್ತು. ಈ ಪೈಕಿ ಈವರೆಗೆ 14 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳು ಉತ್ತರ ನೀಡಿದೆ.

ಫ್ರೆಶ್ ನ್ಯೂಸ್

Latest Posts

Featured Videos