ಮಹಿ ಮೋಡಿಗೆ ಸಲಾಂ!…

ಮಹಿ ಮೋಡಿಗೆ ಸಲಾಂ!…

ಚೆನ್ನೈ, ನ. 27 : ಮಾತಿನ ಮೂಲಕ ಧೋನಿ ಭರ್ಜರಿ ಸಿಕ್ಸರ್ ಸಿಡಿಸಿದ್ದಾರೆ. ಬೌಂಡರಿ, ಸಿಕ್ಸರ್ ಗೆ ಬ್ರೇಕ್ ಬಿದ್ದಿದ್ದರೂ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಸದ್ಯ ಅವರ ಮಾತಿನಲ್ಲೇ ಸಿಕ್ಸರ್ ಸಿಡಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಚೆನ್ನೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತಾವು ಮಾದರಿ ಪತಿಗಿಂತ ಉತ್ತಮ ಎಂದು ವಿವರಿಸಿದರು. ನನ್ನನ್ನು ಆದರ್ಶ ಪತಿ ಎನ್ನುತ್ತಾರೆ. ಆದರೆ ನಾನು ಅದಕ್ಕಿಂತ ಹೆಚ್ಚು. ಯಾಕೆಂದರೆ ನಾನು ಪತ್ನಿಯ ಇಷ್ಟಕ್ಕೆ ಯಾವತ್ತು ಬೇಡವೆಂದಿಲ್ಲ. ಪತ್ನಿ ಸಂತೋಷವಾಗಿದ್ದರೆ ನಾನು ಖುಷಿಯಾಗಿರುತ್ತೇನೆ. ಪ್ರತಿಯೊಬ್ಬ ಪುರುಷನೂ ಸಿಂಹನೇ ಮದುವೆ ಆಗುವ ಮೊದಲು ಅಷ್ಟೇ ಎಂದು ಪಂಚಿಂಗ್ ಡೈಲಾಗ್ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos