ಲಂಡನ್ ಯುವರಾಜ ಹ್ಯಾರಿ ದಂಪತಿ!

ಲಂಡನ್ ಯುವರಾಜ ಹ್ಯಾರಿ ದಂಪತಿ!

ಲಂಡನ್, ಜ. 9 : ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅವರ ಪತ್ನಿ ಮೇಘನ್ ರಾಜಮನೆತನದ ಹಿರಿಯ ಸದಸ್ಯ ಸ್ಥಾನದಿಂದ ಹಿಂದೆ ಸರಿಯುತ್ತಿದ್ದು, ಉತ್ತರ ಅಮೆರಿಕಾದಲ್ಲಿ ಹೆಚ್ಚು ಸಮಯ ಕಳೆಯಲಿರುವುದಾಗಿ ದಂಪತಿಗಳು ಬುಧವಾರ ಐತಿಹಾಸಿಕ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ರಾಜ ದಂಪತಿಗಳು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ,”ನಾವು ರಾಜಮನೆತನದ ‘ಹಿರಿಯ’ ಸದಸ್ಯ ಸ್ಥಾನದಿಂದ ಹಿಂದೆ ಸರಿಯಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ನಿರ್ಧರಿಸಿದ್ದು, ಈ ಸಲುವಾಗಿ ಕೆಲಸ ಮಾಡಲು ಉದ್ದೇಶಿಸಿದ್ದೇವೆ. ಆದರೂ, ಬ್ರಿಟನ್ ರಾಣಿಯನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ ಹಾಗೂ ಬೆಂಬಲಿಸುತ್ತೇವೆ” ಎಂದು ಬಂಕಿಂಗ್ಹ್ಯಾಮ್ ಅರಮನೆಯಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos