ಲಾಕ್ಡೌನ್ ವಿಸ್ತರಣೆ ಫಿಕ್ಸ್..!?

ಲಾಕ್ಡೌನ್ ವಿಸ್ತರಣೆ ಫಿಕ್ಸ್..!?

ಬೆಂಗಳೂರು, ಏ.8 : ಕೊರೋನಾ ಹಿನ್ನಲೆ ಲಾಕ್ ಡೌನ್ ಅವಧಿಯನ್ನು ವಿಸ್ತರಣೆ ಮಾಡುವಂತೆ ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕೊರೊನಾ ಸೋಂಕಿನ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬುವುದನ್ನು ತಡೆಗಟ್ಟಲು ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ಅವಧಿಯನ್ನು ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಡಾ.ದೇವಿಶೆಟ್ಟಿ, ಡಾ.ಮಂಜುನಾಥ್ ನೇತೃತ್ವದಲ್ಲಿ ರಚನೆಯಾಗಿರುವ ಉನ್ನತ ಸಮಿತಿಯು ಲಾಕ್ ಡೌನ್ ವಿಸ್ತರಣೆಗೆ ಒಲವು ತೋರಿದೆ.
ಇಂದು ಸಂಜೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಲಿರುವ ಸಮಿತಿಯು ಕೆಲವು ಜಿಲ್ಲೆಗಳಲ್ಲಿ ಇನ್ನಷ್ಟು ಪರಿಣಾಮಕಾರಿ ಲಾಕ್ ಡೌನ್ ವಿಸ್ತರಣೆ ಮಾಡಬೇಕೆಂದು ವರದಿ ನೀಡಲಿದೆ. ಆದರೆ, ಈ ವರೆಗೆ ಒಂದೇ ಒಂದು ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗದ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುವಂತೆ ತಜ್ಞರ ಸಮಿತಿ ಸಲಹೆ ಮಾಡಿದೆ.ದೇಶದಾದ್ಯಂತ ಜಾರಿ ಮಾಡಿರುವ ಲಾಕ್ ಡೌನ್ ಇದೇ 14ಕ್ಕೆ ಕೊನೆಗೊಳ್ಳಲಿದೆ.ಈಗಿರುವ ಆದೇಶವನ್ನು ಮುಂದುವರೆಸಬೇಕೇ ?ಇಲ್ಲವೇ ಸಡಿಲಿಕೆ ಮಾಡಬೇಕೆ ಎಂಬುದರ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನು ಕೋರಿತ್ತು.
ದೆಹಲಿಯಲ್ಲಿ ನಡೆದ ಘಟನೆ ಬಳಿಕ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಹಾಲಿ ಇರುವ ಷರತ್ತುಗಳನ್ನು ಮುಂದುವರೆಸುವಂತೆ ಸಲಹೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಒಂದು ವೇಳೆ ಲಾಕ್ ಡೌನ್ ಸಡಿಲಿಕೆ ಮಾಡಿದರೆ, ಇಷ್ಟು ದಿನ ಸರ್ಕಾರ ಮಾಡಿರುವ ಪರಿಶ್ರಮ ಹೊಳೆಯಲ್ಲಿ ಹುಣೆಹಣ್ಣು ತೊಳೆದಂತಾಗುತ್ತದೆ.ಯಾವುದೇ ಕಾರಣಕ್ಕೂ ಸಡಿಲಿಕೆ ಬೇಡವೇ ಬೇಡ ಎಂಬುದು ತಜ್ಞರ ವಾದವಾಗಿದೆ.ರಾಜಧಾನಿ ಬೆಂಗಳೂರು , ಮೈಸೂರು, ದಕ್ಷಿಣ ಕನ್ನಡ, ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಪ್ರತಿದಿನ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ.ಸಡಲಿಕೆ ಮಾಡಿದರೆ,ಜನರು ಗುಂಪು ಗುಂಪಾಗಿ ಸೇರುವುದರಿಂದ ಪುನಃ ಸೋಂಕು ಹಬ್ಬುವ ಸಾಧ್ಯತೆ ಇದೆ.
ಒಂದು ಬಾರಿ ಸಮುದಾಯದಕ್ಕೆ ಹಬ್ಬಿದರೆ.ಅದನ್ನು ನಿಯಂತ್ರಿಸುವುದು ಕಷ್ಟ ಸಾಧ್ಯವಾಗಲಿದೆ. ರಾಜ್ಯದಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ಕೆಲವು ಜಿಲ್ಲೆಗಳಲ್ಲಿ ಮುಂದುವರೆಸಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ರಾಜ್ಯದಲ್ಲಿ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿರುವ ಬೆಂಗಳೂರು ಸೇರಿದಂತೆ 9 ಜಿಲ್ಲೆಗಳನ್ನು 10 ದಿನಗಳ ಕಾಲ ಸ್ತಬ್ಧಗೊಳಿಸಲು ಸರ್ಕಾರವು ಮುಂದಾಗಿದೆ. ಇದರ ಜೊತೆಗೆ ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗುತ್ತದೆ.

ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ :  ಅಗತ್ಯ ವಸ್ತುಗಳಾದ ಹಣ್ಣು-ತರಕಾರಿ, ಮೆಡಿಕಲ್ ಶಾಪ್, ಪೆಟ್ರೋಲ್-ಡೀಸೆಲ್, ಹೋಟೆಲ್ ಹಾಗೂ ಆಹಾರ ಸಾಮಗ್ರಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಲಿದೆ.
ಭಾರತ ಕೊರೋನಾ ವೈರಸ್ ತಡೆಗಟ್ಟುವುದಕ್ಕೆ 3 ವಾರಗಳ ಕಾಲ ಲಾಕ್ ಡೌನ್ ಘೋಷಿಸಿರುವುದು ವೈರಸ್ ಹರಡುವುದಿಕೆ ತಡೆಗೆ ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂಬ್ರಿಡ್ಜ್ ಸಂಶೋಧಕರು ಸಲಹೆ : ಒಮ್ಮೆ ಗುಣಮುಖವಾದಂತೆ ತೋರಿ ಮರುಕಳಿಸುವ ಸಾಧ್ಯತೆಗಳಿದ್ದು, ತಿಂಗಳುಗಳಲ್ಲಿ ಸಾವಿರಾರು ಜನರಿಗೆ ವ್ಯಾಪಿಸುವ ಸಾಧ್ಯತೆ ಇರುವ ವೈರಸ್ ಗೆ ಸಂಬಂಧಪಟ್ಟಂತೆ ತಜ್ಞರ ಸಲಹೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಪರಿಶೀಲಿಸುತ್ತಿದೆ.
ನಿಯಮಿತ ಅಂತರದಲ್ಲಿ ಮೂರು ಬಾರಿ ಲಾಕ್ ಡೌನ್ ಗೆ ಕೇಂಬ್ರಿಡ್ಜ್ ಸಂಶೋಧಕರು ಸಲಹೆ ನೀಡಿದ್ದು, 5 ದಿನಗಳ ಅಂತರ ನೀಡುವುದಕ್ಕೆ ಹೇಳಿದೆ. 21 ದಿನಗಳು, 28 ದಿನಗಳು, 18 ದಿನಗಳು ಈ ಮಧ್ಯದಲ್ಲಿ 5 ದಿನಗಳ ಸಡಿಲಿಕೆ ನೀಡುವುದು ಕೊರೋನಾ ವೈರಸ್ ಹರಡುವಿಕೆ ತಡೆ ಹೋರಾಟಕ್ಕೆ ಇರುವ ಪರಿಣಾಮಕಾರಿ ಲಾಕ್ ಡೌನ್ ವಿಧಾನ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮನೆ ಹಾಗೂ ಕೆಲಸದ ಸ್ಥಳಗಳಲ್ಲಿರುವ ಸಾಮಾಜಿಕ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ನಡೆಸಿರುವ ಗಣಿತ ವಿಜ್ಞಾನ ವಿಭಾಗದ ಸಂಶೋಧಕರು ಕೊರೋನಾದಿಂದ ಉಂಟಾಗಬಹುದಾದ ಮರಣ ಪ್ರಮಾಣಗಳನ್ನೂ ಅಂದಾಜಿಸಿದ್ದು, ಒಂದು ವೇಳೆ ಸೋಶಿಯಲ್ ಡಿಸ್ಟೆನ್ಸಿಂಗ್ ನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇದ್ದರೆ ಭಾರತದಲ್ಲಿ 60-64 ವಯಸ್ಸಿನ 6 ಲಕ್ಷ ಜನ, 65-69 ವಯಸ್ಸಿನ 4 ಲಕ್ಷ ಜನ 20 ವಯಸ್ಸಿನ 3 ಲಕ್ಷ ಜನರು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಭಾರತ ಮಾ.25 ರಿಂದ ಕೈಗೊಂಡಿರುವ ಲಾಕ್ ಡೌನ್ ನಿಂದಾಗಿ ಹೊಸ ವೈರಾಣು ಹರಡುವಿಕೆ ಕಡಿಮೆಯಾಗುವ ಸಾಧ್ಯತೆ ಇದೆ.
ಆದರೆ ಮೇ.15 ರ ವೇಳೆಗೆ ಮತ್ತೆ, 6,000 ಕ್ಕಿಂತ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.ಈ ರೀತಿಯಾಗಬಾರದೆಂದರೆ, ಕೊರೋನಾ ವಿರುದ್ಧ ಹೋರಾಡಲು 49 ದಿನಗಳ ಲಾಕ್ ಡೌನ್ ಅಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಕೊರೊನಾ ಪ್ರಕರಣಗಳು ಪತ್ತೆಯಾಗದ ಜಿಲ್ಲೆಗಳಲ್ಲಿ ಲಾಕ್ ಡೌನ್ ಕೆಲವು ಷರತ್ತುಗಳೊಂದಿಗೆ ಸಡಿಲಿಕೆಯಾಗುವ ಸಂಭವವಿದೆ.

ಫ್ರೆಶ್ ನ್ಯೂಸ್

Latest Posts

Featured Videos