ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಲಿಂಗದೇವರು

ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಲಿಂಗದೇವರು

ಹುಳಿಯಾರು: ಕೋಡಿಪಾಳ್ಯದ ಶ್ರೀ ಮಾತಾ ಚರಿಟಬಲ್ ಟ್ರಸ್ಟ್ನ ಸಾಂಸ್ಕೃತಿಕ ಸದನದ ಕಾರ್ಯದರ್ಶಿಯಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಅವರು ಆಯ್ಕೆಯಾಗಿದ್ದಾರೆ.
ಈ ಹಿಂದೆ ಕಾರ್ಯದರ್ಶಿಯಾಗಿದ್ದ ರಂಗಕರ್ಮಿ ತೊ.ನಂಜುಂಡಸ್ವಾಮಿ ಅವರ ನಿಧನದಿಂದಾಗಿ ತೆರವಾಗಿದ್ದ ಈ ಸ್ಥಾನಕ್ಕೆ ಶ್ರೀ ಮಾತಾ ಚರಿಟಬಲ್ ಟ್ರಸ್ಟ್ನ ಪದಾಧಿಕಾರಿಗಳ ಸಭೆಯಲ್ಲಿ ಬಿ.ಎಸ್.ಲಿಂಗದೇವರು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಈ ಸಂದರ್ಭದಲ್ಲಿ ಮಾತನಾಡಿ ಕೋವಿಡ್-೧೯ ನಿಂದಾಗಿ ಕಲಾವಿದರು, ಕಲಾತಂಡಗಳು ಸಂಕಷ್ಟಕ್ಕೆ ಸಿಲಿಕಿದ್ದಾರೆ. ಇವರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಆತ್ಮಸ್ಥೈರ್ಯ ತುಂಬುವ ಕೆಲಸಗಳು ರಾಜ್ಯಾದ್ಯಂತ ನಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕೋವಿಡ್ ನಂತರ ಮೊದಲ ವೇದಿಕೆ ಕಾರ್ಯಕ್ರಮವನ್ನು ನವರಾತ್ರಿ ಉತ್ಸವದಲ್ಲಿ ಕೋಡಿಪಾಳ್ಯದಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ರಂಗಕರ್ಮಿ ತೊ.ನಂಜುಂಡಸ್ವಾಮಿ ಅವರು ಹುಳಿಯಾರನ್ನು ಸಾಂಸ್ಕೃತಿಕವಾಗಿ ಬೆಳೆಸುವ ಕನಸು ಕಂಡಿದ್ದರು. ಹಾಗಾಗಿಯೇ ಕಳೆದ ನಾಲ್ಕೈದು ವರ್ಷಗಳಿಂದ ರಾಜ್ಯದ ಪ್ರಖ್ಯಾತ ಕಲಾತಂಡಗಳ ಜೊತೆಗೆ ಹೊರರಾಜ್ಯಗಳ ವಿವಿಧ ಕಲಾಪ್ರಕಾರಗಳ ಪ್ರದರ್ಶನ ವ್ಯವಸ್ಥೆ ಮಾಡಿದ್ದರು. ಈ ಕಲಾಸೇವೆನ್ನು ಮುಂದುವರಿಕೊಂಡು ಹೋಗುವ ಮೂಲಕ ತೊ.ನಂ ಕನಸು ನನಸಿಗೆ ಶ್ರಮಿಸುವುದಾಗಿ ಅವರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos