ಪೋಲಿಯೊ ಮುಕ್ತ ರಾಷ್ಟ್ರವನ್ನು ಕಟ್ಟೋಣ

ಪೋಲಿಯೊ ಮುಕ್ತ ರಾಷ್ಟ್ರವನ್ನು ಕಟ್ಟೋಣ

ಕೆ.ಆರ್.ಪುರ, ಜ. 20: ಐದು ವರ್ಷಗಳಿಗಿಂತ ಒಳಗಿನ ಮಕ್ಕಳಿಗೆ  ಕಡ್ಡಾಯವಾಗಿ ಪಲ್ಸ್ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಪೋಲಿಯೊ ಮುಕ್ತ ರಾಷ್ಟ್ರವನ್ನು ಕಟ್ಟ ಬೇಕೆಂದು ಸ್ಥಳೀಯ ಶಾಸಕ ಬೈರತಿ ಬಸವರಾಜ್ ಸಲಹೆ ನೀಡಿದರು.

ಬೆಂಗಳೂರು ನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಕೆ.ಆರ್.ಪುರದ ಬಸವನಪುರ ವಾರ್ಡ್ ನಲ್ಲಿ ಪಲ್ಸ್ ಪೊಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು.

ಈಗಾಗಲೆ ನಮ್ಮ ರಾಷ್ಟ್ರ ಪೊಲಿಯೊ ಮುಕ್ತವಾಗಿದೆ, ಇನ್ನೂ ನೆರೆ ರಾಷ್ಟ್ರಗಳಿಂದಾಗಿ ಕೆಲವು ಪೋಲಿಯೊ ಪ್ರಕರಣಗಳು ನಮ್ಮಲ್ಲಿ ಕಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಬೇರು ಸಮೇತ ಕಿತ್ತು ಹಾಕಲು ನಾವೆಲ್ಲಾ ಕೈಜೋಡಿಸಬೇಕು ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಜಯಪ್ರಕಾಶ್, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಶಿವರಾಜ್, ಬೆಂಗಳೂರು ಪೂರ್ವ ತಾಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್, ಬಸವನಪುರ ವಾರ್ಡ್ ಆರೋಗ್ಯ ನಿರೀಕ್ಷಕ  ಗುರುರಾಜ್ , ಮುಖಂಡರಾದ ಆಂಥೋನಿ ಸ್ವಾಮಿ, ಮುರಳಿ, ಶಿವಪ್ಪ, ಪಟಾಕಿ ರವಿ ಮುಂತಾದವರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos