ಬ್ರಿಯಾನ್ ಲಾರಾ ರಿಂದ ವಾರ್ನರ್ ಗೆ ಮೆಚ್ಚುಗೆ

ಬ್ರಿಯಾನ್ ಲಾರಾ ರಿಂದ ವಾರ್ನರ್ ಗೆ ಮೆಚ್ಚುಗೆ

ಮುಂಬೈ.ಡಿ.10: ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳ ಪೈಕಿ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಬ್ರಿಯಾನ್ ಚಾರ್ಲ್ಸ್ ಲಾರಾ ಅಗ್ರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಅಜೇಯ 400 ರನ್ಗಳ ವಿಶ್ವ ದಾಖಲೆ ಈಗಲೂ ಅಚ್ಚಳಿಯದಂತೆ ಉಳಿದಿದೆ. ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಆಸೀಸ್ನ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ (335*) ಪಾಕಿಸ್ತಾನ ವಿರುದ್ಧದ ಡೇ-ನೈಟ್ ಟೆಸ್ಟ್ನಲ್ಲಿ ತ್ರಿಶತಕ ಬಾರಿಸಿದ್ದರು. ಈ ಸಂದರ್ಭದಲ್ಲಿ ವಾರ್ನರ್ ಇನ್ನು 65 ರನ್ಗಳನ್ನು ಗಳಿಸಿದ್ದರೆ ಲಾರಾ ಅವರ ವಿಶ್ವ ದಾಖಲೆಯನ್ನು ಮುರಿಯುವ ಉತ್ತಮ ಅವಕಾಶವಿತ್ತು. ಆದರೆ, ಕಾಂಗರೂ ಪಡೆಯ ನಾಯಕ ಟಿಮ್ ಪೇಯ್ನ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು.

ಹೀಗಾಗಿ 2004ರಲ್ಲಿ ಆಂಟಿಗಾದಲ್ಲಿ ಇಂಗ್ಲೆಂಡ್ ವಿರುದ್ಧ ಲಾರಾ ದಾಖಲಿಸಿದ್ದ 400* ರನ್ಗಳ ವಿಶ್ವ ದಾಖಲೆ ಹಾಗೇ ಉಳಿದಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಲಾರಾ, ವಾರ್ನರ್ ಈ ದಾಖಲೆ ಮುರಿಯುವ ಎಲ್ಲಾ ಅವಕಾಶ ಹೊಂದಿದ್ದರು. ಇದಕ್ಕೆ ಆಸ್ಟ್ರೇಲಿಯಾ ನಾಯಕ ಅವಕಾಶ ಮಾಡಿಕೊಡದೇ ಇರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos