ಸಾವಿಗೆ ದಾರಿಯಾಗ್ತಿದೆ ವೆಂಟಿಲೇಟರ್ ಕೊರತೆ

ಸಾವಿಗೆ ದಾರಿಯಾಗ್ತಿದೆ ವೆಂಟಿಲೇಟರ್ ಕೊರತೆ

ತುಮಕೂರು: ಕೊರೋನಾ ಸೋಂಕಿನಿAದ ಮೃತಪಡುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಸೋಂಕಿನಿAದ ಸಾಯುವವರ ಪ್ರಮಾಣ ಶೇ 1.56 ಇದ್ದರೆ, ಜಿಲ್ಲೆಯಲ್ಲಿ ಶೇ 2.1ರಷ್ಟಿದೆ.
ಜಿಲ್ಲೆಯಲ್ಲಿ ಮಾರ್ಚ್ ಕೊನೆಯಲ್ಲಿ ಕೊರೋನಾ ಸೋಂಕಿನ ಮೊದಲ ಪ್ರಕರಣ ವರದಿಯಾಯಿತು. ಆಗಸ್ಟ್ ಅಂತ್ಯಕ್ಕೆ ಸೋಂಕಿತರ ಸಂಖ್ಯೆ 5 ಸಾವಿರ ದಾಟಿತು. ಆದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಈ ಎರಡು ತಿಂಗಳಲ್ಲಿ 13 ಸಾವಿರ ಮಂದಿಗೆ ಸೋಂಕು ತಗುಲಿದೆ.
ದೊರೆಯದ ವೆಂಟಿಲೇಟರ್: ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ 8 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 21 ಹಾಸಿಗೆ ಸಾಮರ್ಥ್ಯದ ತುರ್ತುನಿಗಾ ಘಟಕ (ಐಸಿಯು) ಇದೆ. ಸಿದ್ಧಗಂಗಾ ಆಸ್ಪತ್ರೆಯಲ್ಲಿ 25, ಶ್ರೀದೇವಿ ಆಸ್ಪತ್ರೆ 7, ಸಿದ್ಧಾರ್ಥ ಆಸ್ಪತ್ರೆಯಲ್ಲಿ 12 ಹಾಸಿಗೆ ಸಾಮರ್ಥ್ಯದ ಐಸಿಯು ಇದೆ. ಉಳಿದ ಕಡೆಗಳಲ್ಲಿ ತಲಾ ಐದು ಹಾಸಿಗೆಗಳ ಐಸಿಯು ಇದೆ. ಆದರೆ ಜಿಲ್ಲೆಯಲ್ಲಿ ಕೋವಿಡ್ನಿಂದ ಗಂಭೀರ ಸ್ಥಿತಿ ಎದುರಾದಾಗ ರೋಗಿಗಳಿಗೆ ಐಸಿಯುಗಳಲ್ಲಿ ಹಾಸಿಗೆಗಳೇ ಸಿಗುತ್ತಿಲ್ಲ!
ಜ್ವರ, ಕೆಮ್ಮು, ನೆಗಡಿ ಸೇರಿದಂತೆ ರೋಗದ ಲಕ್ಷಣಗಳು ಕಂಡುಬAದ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಆದರೆ ಜಿಲ್ಲೆಯಲ್ಲಿ ರೋಗಿಗಳು ಆಸ್ಪತ್ರೆಗಳಿಗೆ ಗಂಭೀರ ಸ್ಥಿತಿ ತಲುಪಿದಾಗ ದಾಖಲಾಗುತ್ತಿದ್ದಾರೆ. ಈ ಕಾರಣದಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos