ಲಾಕ್‌ಡೌನ್‌ ನಿಂದ ಕೈಗಾರಿಕೆಗಳ ಕೊರತೆ

  • In State
  • May 12, 2020
  • 164 Views
ಲಾಕ್‌ಡೌನ್‌ ನಿಂದ ಕೈಗಾರಿಕೆಗಳ ಕೊರತೆ

ಬೆಂಗಳೂರು:ಮೇ,12: ಲಾಕ್‌ಡೌನ್‌ ಸಡಿಲಗೊಂಡು ಕೈಗಾರಿಕೆಗಳು ಮತ್ತೆ ಆರಂಭಗೊಳ್ಳುತ್ತಿವೆ ಆದರೆ, ಆಗಲೇ ಸಾಕಷ್ಟು ಆರ್ಥಿಕ ನಷ್ಟದಲ್ಲಿರುವ ಕೈಗಾರಿಕೆಗಳಿಗೆ ಈಗ ಕಾರ್ಮಿಕರು ಮತ್ತು ಕಚ್ಛಾ ವಸ್ತುಗಳ ಕೊರತೆ ಬಹುವಾಗಿ ಕಾಡುತ್ತಿದೆ. ಉತ್ಪಾದನೆಗೆ ಬೇಡಿಕೆ ಬರುತ್ತಿಲ್ಲ, ಉತ್ಪಾದನೆ ಮಾಡಿಟ್ಟು ಕಾಯುವ ಸ್ಥಿತಿಯಲ್ಲಿ ಕೈಗಾರಿಕೆಗಳೂ ಇಲ್ಲ. ರಾಜ್ಯದ ನಾನಾ ಭಾಗಗಳಲ್ಲಿರುವ ಪ್ರಮುಖ ಉದ್ಯಮಗಳ ಸ್ಥಿತಿಗತಿಯ ಒಂದು ಚಿತ್ರಣ ಇಲ್ಲಿದೆ.
ಶೇ.60ರಷ್ಟು ಕೈಗಾರಿಕೆಗಳು ಬಾಗಿಲು ತೆರೆದಿವೆಯಾದರೂ ಕಾರ್ಮಿಕರ ಕೊರತೆ ಎಲ್ಲವರ್ಗದ ಘಟಕಗಳನ್ನು ಕಾಡುತ್ತಿದೆ. ಅದರಲ್ಲೂಫೌಂಡ್ರಿ ಕ್ಲಸ್ಟರ್‌ನಲ್ಲಿಕಾರ್ಮಿಕರ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. 15ಕ್ಕೂ ಹೆಚ್ಚಿನ ಫೌಂಡ್ರಿಗಳು ಉತ್ತರ ಭಾರತದ ನೌಕರರನ್ನೇ ಅವಲಂಬಿಸಿವೆ. ಈಗ ಅವರೆಲ್ಲಊರಿಗೆ ತೆರಳಿದ್ದಾರೆ. ಲಾಕ್‌ಡೌನ್‌ ಪೂರ್ವದಲ್ಲಿರಫ್ತು ಮಾಡಿದ ಉತ್ಪನ್ನಗಳ ಬಿಲ್‌ ಪಾವತಿಯಾಗದೆ ಹಣದ ಕೊರತೆಯೂ ಎದುರಾಗಿದೆ. ಜಿಲ್ಲೆಯಲ್ಲಿಶೇ.40ಷ್ಟು ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಉದ್ಯಮಿಗಳು.
ರಾಜ್ಯದಲ್ಲಿಬೆಂಗಳೂರು ಬಳಿಕ ಶಿವಮೊಗ್ಗ ಅತಿದೊಡ್ಡ ಆಟೊಮೊಬೈಲ್‌ ಕೈಗಾರಿಕಾ ಕೇಂದ್ರ ಎನಿಸಿದೆ. ಕೊರೊನಾ ಪೂರ್ವದಲ್ಲೇ ಮಕಾಡೆ ಮಲಗಿದ್ದ ಈ ಕ್ಷೇತ್ರ ಈಗ ಇನ್ನಷ್ಟು ಸಂಕಷ್ಟದಲ್ಲಿದೆ. ವಾಹನ ತಯಾರಿಕಾ ಕಂಪನಿಗಳಿಗೆ ಬಿಡಿ ಭಾಗ ಪೂರೈಸುವ ಇಲ್ಲಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆರ್ಡರೇ ಬಂದಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿಶೇ. 60 ಕೈಗಾರಿಕೆಗಳು ಕೆಲಸ ಆರಂಭಿಸಿವೆ.

 

 

ಫ್ರೆಶ್ ನ್ಯೂಸ್

Latest Posts

Featured Videos