ಕ್ರೀಡೆ ನಮ್ಮ ಜೀವನದ ಒಂದು ಅಂಗ

ಕ್ರೀಡೆ ನಮ್ಮ ಜೀವನದ ಒಂದು ಅಂಗ

  ಕೃಷ್ಣರಾಜಪುರ, ನ. 13: ಭಾರತ ದೇಶವು ಧರ್ಮ ಸಂಸ್ಕೃತಿ ಸಂಪ್ರದಾಯಗಳ ತವರೂರಾಗಿದೆ ಹಾಗೆಯೇ ಕ್ರೀಡೆಯಲ್ಲೂ ತನ್ನದೇ ಆದ ಛಾಪುಮೂಡಿಸಿದ್ದು, ವಿದ್ಯಾರ್ಥಿಗಳಿಗೆ ಕ್ರೀಡೆಯ ಮಹತ್ವನ್ನು ತಿಳಿಸುವ ಮೂಲಕ ದೇಶಕ್ಕೆ ಕೊಡುಗೆ ನೀಡುವ ಕ್ರೀಡಾ ಪಟುವನ್ನಾಗಿ ಮಾಡುವಂತೆ ಭಾರತ ಮಹಿಳಾ ಥ್ರೋಬಾಲ್ ತಂಡದ ನಾಯಕಿ ಕಾರ್ಮಲ್ ಅವರು ತಿಳಿಸಿದರು.

ಕೆ.ನಾರಾಯಣ ಪುರದ  ಬಾಲ್ಡ್‌ವಿನ್‌ ಶಾಲೆಯ 16 ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಕ್ರೀಡೆಯಲ್ಲಿ ಆಸಕ್ತಿ ಮೂಡಿಸುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.

ಶಿಕ್ಷಣ ಮಕ್ಕಳ ಬುದ್ಧಿಯನ್ನು ಚುರುಕುಗೊಳಿಸಿದರೆ ಕ್ರೀಡೆ ಮಕ್ಕಳನ್ನು ದೈಹಿಕವಾಗಿ ಸದೃಡಗೊಳ್ಳುವಂತೆ ಮಾಡುತ್ತದೆ ಎಂದು ತಿಳಿಸಿದರು.

ಮಾತನಾಡಿದ ನ್ಯೂ ಬಾಲ್ಡ್ವಿನ್ ಶಾಲೆ ಅಧ್ಯಕ್ಷ ಆಂಜಿನಪ್ಪ ಅವರು ವಿಶ್ವವನ್ನು ಬದಲಾಯಿಸಬಹುದಾದ ಅತ್ಯಂತ ಪ್ರಬಲ ಸಾಧನ ಶಿಕ್ಷಣವಾಗಿದೆ ಹಾಗೆಯೇ ವಿಶ್ವಕ್ಕೆ ತಮ್ಮ ಶಕ್ತಿ ತೊರುವ  ಕ್ರೀಡೆಯೂ ನಮ್ಮ ಜೀವನದ ಒಂದು ಅಂಗ ಎಂದು ತಿಳಿದರು.

ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಸಾಹಿತ್ಯ, ಕ್ರೀಡಾ, ಸಂಗೀತ, ಯೋಗ ಇತ್ಯಾದಿ ವಿಷಯಗಳನ್ನು ಕುರಿತು ಹೆಚ್ಚಿನ ಒತ್ತು  ನೀಡಲಾಗುವುದು, ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಮಕ್ಕಳ ಬೆಳವಣೆಗೆಗೆ ಮಾರಕವಾಗಿದೆ ಅದರ ನಿರ್ಮೂಲನೆಗೆ ಕ್ರೀಡೆ ಸೇರಿದಂತೆ ಇನ್ನಿತರ ಚಟುವಟಿಕೆಗಳು ಸಹಾಯಕವಾಗಲಿದೆ ಎಂದು ಹೇಳಿದರು .

ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ರಮಾದೇವಿ,ಪ್ರಾಂಶುಪಾಲರಾದ ನಂದಿನಿ ಇದ್ದರು..

ಫ್ರೆಶ್ ನ್ಯೂಸ್

Latest Posts

Featured Videos