ವಿಸ್ಡನ್‌ ದಶಕದ ಪಟ್ಟಿಯಲ್ಲಿ ಕೊಹ್ಲಿ

ವಿಸ್ಡನ್‌ ದಶಕದ ಪಟ್ಟಿಯಲ್ಲಿ ಕೊಹ್ಲಿ

ಲಂಡನ್‌, ಡಿ. 26: ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ, ವಿಸ್ಡನ್‌ ಪ್ರಕಟಿಸಿದ ವಾರ್ಷಿಕ ಪತ್ರಿಕೆಯಲ್ಲಿ ದಶಕದ ಶ್ರೇಷ್ಠ ಕ್ರಿಕೆಟರ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.

ಕಳೆದ ಹತ್ತು ವಷರ್ವಗಳಲ್ಲಿ ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳಿಗಿಂತಲೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ರೀತಿಯಲ್ಲಿ ಹೆಚ್ಚು ರನ್‌ಗಳನ್ನು ಗಳಿಸಿದ್ದು, ದಶಕದ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ. ಅದ್ಭುತ ಪ್ರದರ್ಶನ ಮೂಲಕ 31 ವರ್ಷದ ಸ್ಟಾರ್‌ ಬ್ಯಾಟ್ಸ್‌ಮನ್‌ಗೆ ವಿಸ್ಡನ್‌ ದಶಕದ ಟೆಸ್ಟ್‌ ತಂಡದ ನಾಯಕತ್ವ ಮತ್ತು ಏಕದಿನ ತಂಡದಲ್ಲೂ ಸ್ಥಾನ ಲಭ್ಯವಾಗಿದೆ.

ಭರ್ಜರಿ ಪ್ರದರ್ಶನದ ಮೂಲಕ ಅಪರೂಪದ ಅಂಕಿ ಅಂಶಗಳ ದಾಖಲೆಯನ್ನೂ ಕೊಹ್ಲಿ ಬರೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಮಾದರಿಗಳಲ್ಲಿ 50ಕ್ಕೂ ಹೆಚ್ಚಿನ ಬ್ಯಾಟಿಂಗ್‌ ಸರಾಸರಿಯನ್ನು ಹೊಂದಿರುವ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ.

ವಿರಾಟ್‌ ಕೊಹ್ಲಿ ಹೊರತಾಗಿ ಟಾಪ್‌ 5 ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜರಾದ ಎಬಿ ಡಿ’ವಿಲಿಯರ್ಸ್‌ ಮತ್ತು ಡೇಲ್‌ ಸ್ಟೇನ್‌, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಹಾಗೂ ಆಸೀಸ್‌ ಮಹಿಳಾ ತಂಡದ ಆಲ್‌ರೌಂಡರ್‌ ಎಲೀಸ್‌ ಪೆರ್ರಿ ಸ್ಥಾನ ಪಡೆದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos