ಕಪ್ಪುಕೊಳ ಹಾರರ್ ಥ್ರಿಲ್ಲರ್

ಕಪ್ಪುಕೊಳ ಹಾರರ್ ಥ್ರಿಲ್ಲರ್

ಬೆಂಗಳೂರು, ನ. 05: ಕಪ್ಪುಕೊಳ ಕನ್ನಡದ ವಿಭಿನ್ನ ಶೈಲಿಯ ಹಾರರ್ ಚಿತ್ರ ನವೆಂಬರ್   ರಿಂದ ಬೆಂಗಳೂರಿನಲ್ಲಿ ಶುರುವಾಗಿದೆ. ಮಹದೇಶ್ವರ ಎಂಟರ್ಪ್ರೈಸಸ್ ಬ್ಯಾನರಡಿಯಲಿ ನಿರ್ಮಾಣವಾಗುತ್ತಿರುವ ಬಿ ಟಿ ಲಲಿತಾ ನಾಯಕ್ ರವರ ಆಶೀರ್ವಾದದಡಿಯಲ್ಲಿ ಶಂಕರ್ನಾಗ್ ಫಿಲಂ ಶಾಲೆ ಅರ್ಪಿಸುತ್ತಿರುವ ಈ ಚಿತ್ರದ ನಿರ್ದೇಶಕರು ಓಂಪ್ರಕಾಶ್ ನಾಯಕ್. ಕಥೆ ಚಿತ್ರಕಥೆ ಸಂಭಾಷಣೆ ಹಾಡುಗಳು ಬರೆದು ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಸಹ ಓಂ ಪ್ರಕಾಶ್ ನಾಯಕ್ ಅವರೆ. ಬೆಂಗಳೂರು ಹಾಗೂ ತೀರ್ಥಹಳ್ಳಿಯಲ್ಲಿ ಎರಡು ಹಂತ ಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಇದೀಗ ಬೆಂಗಳೂರಿನಲ್ಲಿ ಚಿತ್ರೀಕರಣ ಸಾಗಿದೆ. ಈ ಚಿತ್ರ ಹಾರರ್ ಆಗಿದ್ದರೂ ಸಹ ಡ್ರಗ್ ಅಡಿಕ್ಟ್ ಗಳ ಮೇಲೂ ಬೆಳಕು ಚೆಲ್ಲಲಾಗಿದೆ. ಡ್ರಗ್ ವ್ಯಸನಿಗಳಾಗಿರುವ ಇಬ್ಬರು ಯುವಕರು ಅಡ್ ಶೂಟಿಂಗ್ ಮಾಡಲು ಇಬ್ಬರು ನಾಯಕಿಯರನ್ನು ಪಶ್ಚಿಮಘಟ್ಟದ ಕಾಡಿಗೆ ಕರೆದೊಯ್ಯುತ್ತಾರೆ. ಅಲ್ಲಿ ನಡೆಯುವ ಭಯಾನಕ ಘಟನೆಗಳಿಗೆ ಕಾರಣ ಏನು ಎಂಬುದೇ ಚಿತ್ರದ ಸಾರ.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ಓಂಪ್ರಕಾಶ್ ನಾಯಕ್, ಸ್ಮೈಲ್ ಶಿವು, ಹೇಮಾ, ರಾಗಿಣಿ, ಕೆಎಸ್ ಗುಡಿಗೇರಿ, ವೆಂಕಟೇಶ್ ರಾವ್, ಶ್ರೀನಾಥ್ ತಿರ್ಥಹಳ್ಳಿ ಲಿಂಗರಾಜ್, ಶಂಕರ್ ಬಾಬು ಮುಂತಾದವರು ಅಭಿನಯಿಸುತ್ತಿದ್ದಾರೆ. ತಂತ್ರಜ್ಞರಾಗಿ ಕ್ಯಾಮರಾ ರವಿ, ಸಹನಿರ್ದೇಶನ ಶಂಕರಬಾಬು, ಕಾರ್ಯಕಾರಿ ನಿರ್ಮಾಪಕರು ಎಸ್ಎಲ್ ಉಮಾದೇವಿ, ನಿರ್ದೇಶನ ನಿರ್ಮಾಣ ಓಂಪ್ರಕಾಶ್ ನಾಯಕ್. ಈ ತಿಂಗಳಲ್ಲಿ ಚಿತ್ರೀಕರಣ ಮುಗಿಸಿ ಡಿಸೆಂಬರ್ ಅಂತ್ಯದಲ್ಲಿ ಚಿತ್ರ ಸಿದ್ಧವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ

ಫ್ರೆಶ್ ನ್ಯೂಸ್

Latest Posts

Featured Videos