ಕನ್ನಡ ಭಾಷೆಯೆಂದರೆ ಬಹಳ ಇಷ್ಟ: ಶಾನ್ವಿ ಶ್ರೀವಾತ್ಸವ್

ಕನ್ನಡ ಭಾಷೆಯೆಂದರೆ ಬಹಳ ಇಷ್ಟ: ಶಾನ್ವಿ ಶ್ರೀವಾತ್ಸವ್

ಬೆಂಗಳೂರು, ನ. 29: ಚಿತ್ರರಂಗದಲ್ಲಿ ಪರ ಭಾಷೆಯಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಪರ ಭಾಷೆಗೆ ಹೊಗೊದು ಸರ್ವೇ ಸಾಮಾನ್ಯ. ಹೌದು, ‘ಚಂದ್ರಲೇಖಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಶಾನ್ವಿ ಶ್ರೀವಾತ್ಸವ್. ನಂತರ ಹಲವಾರು ಚಿತ್ರಗಳಗಳಲ್ಲಿ ನಟಿಸಿರುವ ಅವರು ಕನ್ನಡತಿಯೇ ಆಗಿ ಹೋಗಿದ್ದಾರೆ. ಅಲ್ಲದೇ ಅವರು ನಟಿಸಿದ್ದ ‘ಗೀತಾ’ ಚಿತ್ರಕ್ಕೆ ಕನ್ನಡ ಭಾಷೆಯನ್ನು ಕಲಿತು ಡಬ್ ಸಹ ಮಾಡಿದ್ದರು.

ನಿನ್ನೆಯಷ್ಟೇ ಶಾನ್ವಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಒಳ್ಳೆಯ ಕಾಮೆಂಟ್ ಗಳನ್ನು ಪಡೆಯತ್ತಿದೆ. ಈ ಚಿತ್ರಕ್ಕೆ ನಾಯಕಿಯಾಗಿರುವ ಶಾನ್ವಿ ಬಹಳ ಖುಷಿಯಾಗಿದ್ದು, 2 ಭಾಷೆಯ ಅವರತಣಿಕೆಗೆ ಡಬ್ ಮಾಡಿದ್ದಾರಂತೆ.

‘ಈ ಚಿತ್ರ ಹಾಗೂ ನನ್ನ ಲಕ್ಷ್ಮಿ ಎಂಬ ಪಾತ್ರ ಪ್ರೇಕ್ಷಕರನ್ನು ಬಹಳ ಕಾಡುತ್ತದೆ. ನನಗೆ ಕನ್ನಡ ಭಾಷೆಯೆಂದರೆ ಬಹಳ ಇಷ್ಟ. ಹೀಗಾಗಿ ಈ ಭಾಷೆಯನ್ನು ಕಲಿತುಕೊಂಡು ಡಬ್ ಮಾಡಿದ್ದೇನೆ. ನಮ್ಮ 3 ವರ್ಷದ ಶ್ರಮ ಈ 4 ನಿಮಿಷದ ಟ್ರೈಲರ್ ನಲ್ಲಿ ಗೊತ್ತಾಗುತ್ತಿದೆ’ ಎಂದು ಪತ್ರಿಕಾಗೋಷ್ಟಿಯಲ್ಲಿ ಕನ್ನಡದಲ್ಲಿಯೇ ಮಾತನಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos