ಐಎಸ್ಎಲ್ ಫೈನಲ್ ಸೇರಿರುವ ಬೆಂಗಳೂರು

ಐಎಸ್ಎಲ್ ಫೈನಲ್ ಸೇರಿರುವ ಬೆಂಗಳೂರು

ಮುಂಬೈ, ಮಾ. 13, ನ್ಯೂಸ್ ಎಕ್ಸ್ ಪ್ರೆಸ್: ಮತ್ತೆ 2ನೇ ಬಾರಿ ಐಎಸ್ಎಲ್ ಫೈನಲ್ ಸೇರಿರುವ ಬೆಂಗಳೂರು ತಂಡ ಪ್ರಶಸ್ತಿಗಾಗಿ ಗೋವಾ ವಿರುದ್ಧ ಸೆಣಸಾಡಲಿದೆ.

5ನೇ ಆವೃತ್ತಿಯ 2ನೇ ಸೆಮಿಫೈನಲ್ ನಲ್ಲಿ ಗೋವಾ ತಂಡ ಮುಂಬೈ ಸಿಟಿ ಎಫ್ ಸಿ ವಿರುದ್ಧ ಒಟ್ಟಾರೆ 5-2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಗೇರಿತು. ಮುಂಬೈನಲ್ಲಿ ನಡೆದಿದ್ದ ಮೊದಲ ಚರಣದ ಪಂದ್ಯದಲ್ಲಿ 5-1 ಗೋಲುಗಳಿಂದ ಗೆದ್ದು ಬೀಗಿದ್ದ ಗೋವಾ, ಮಾ.11ರಂದು ಗೋವಾದಲ್ಲಿ ನಡೆದಿದ್ದ 2ನೇ ಚರಣದ ಪಂದ್ಯದಲ್ಲಿ 0-1 ಗೋಲುಗಳಿಂದ ಸೋಲುಂಡಿತು. ಮೊದಲ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಜಯಿಸಿದ್ದು ಗೋವಾ ತಂಡಕ್ಕೆ ನೆರವಾಯಿತು.

ಇದೇ ಮಾ.17ರಂದು ಮುಂಬೈನ ಫುಟ್ಬಾಲ್ ಅರೆನಾದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಉಭಯ ತಂಡಗಳು ಚೊಚ್ಚಲ ಬಾರಿಗೆ ಚಾಂಪಿಯನ್ ಆಗಲು ಸೆಣಸಲಿವೆ. ಈ ಆವೃತ್ತಿಯಲ್ಲಿ ಗೋವಾ ವಿರುದ್ಧ ಆಡಿದ 2 ಪಂದ್ಯಗಳಲ್ಲಿ  ಬಿಎಫ್ ಸಿ ಜಯಿಸಿತ್ತು.

ಫ್ರೆಶ್ ನ್ಯೂಸ್

Latest Posts

Featured Videos