ಐಪಿಎಲ್ ಹರಾಜಿಗೆ :10 ದಿನ ಬಾಕಿ

 ಐಪಿಎಲ್ ಹರಾಜಿಗೆ :10 ದಿನ ಬಾಕಿ

ಬೆಂಗಳೂರು, ಡಿ. 11 : 13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನೇನು ಕೆಲವು ತಿಂಗಳುಗಳಷ್ಟೆ ಬಾಕಿ ಉಳಿದಿದೆ. ಇದಕ್ಕೂ ಮೊದಲು ಎಲ್ಲಾ ಫ್ರಾಂಚೈಸಿ ತಮಗೆ ಬೇಕಾದ ಆಟಗಾರರನ್ನು ಉಳಿಸಿ ಉಳಿದವರನ್ನು ಕೈಬಿಟ್ಟಿದೆ. ಡಿಸೆಂಬರ್ 19 ರಂದು ಇದೇ ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಅಚ್ಚರಿ ಎಂಬಂತೆ ಈ ಬಾರಿ ಕೆಲವು ಸ್ಟಾರ್ ಆಟಗಾರರನ್ನೇ ಕೆಲವು ಫ್ರಾಂಚೈಸಿ ಹರಾಜಿಗೂ ಮುನ್ನ ಕೈಬಿಟ್ಟಿರುವುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಯುವರಾಜ್ ಸಿಂಗ್. 2011 ವಿಶ್ವಕಪ್ ಹೀರೋವನ್ನು ಆರ್​ಸಿಬಿ ತಂಡ 2015ರ ಹರಾಜಿನಲ್ಲಿ ಬರೋಬ್ಬರು 14 ಕೋಟಿ ಕೊಟ್ಟು ಖರೀದಿ ಮಾಡಿತು. ಆದರೆ, ಉತ್ತಮ ಪ್ರದರ್ಶನ ನೀಡದ ಪರಿಣಾಮ ಅದೇ ವರ್ಷ ಹರಾಜಿಗೂ ಮುನ್ನ ಕೈಬಿಟ್ಟಿತು. ಈ ಸಂದರ್ಭ 2016ರ ಐಪಿಎಲ್​ಗು ಮುನ್ನ ನಡೆದ ಹರಾಜಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಯುವಿ ಅನ್ನು ದಾಖಲೆ ಎಂಬಂತೆ 16 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಇದೇರೀತಿ ಮುಂದಿನ ತಿಂಗಳು ನಡೆಯಲಿರುವ ಹರಾಜಿನಲ್ಲಿ ಕೈಬಿಟ್ಟ ಈ ಸ್ಟಾರ್ ಆಟಗಾರರು ಕೋಟಿ ಕೋಟಿಗೆ ಸೇಲ್ ಆಗಲಿದ್ದಾರೆ ಎಂದು ಹೇಳಲಾಗುತ್ತದೆ

ಫ್ರೆಶ್ ನ್ಯೂಸ್

Latest Posts

Featured Videos