ಅಂತರ್ ಕಾಲೇಜು ದೇಹದಾರ್ಢ್ಯ  ಸ್ಪರ್ಧೆ

ಅಂತರ್ ಕಾಲೇಜು ದೇಹದಾರ್ಢ್ಯ  ಸ್ಪರ್ಧೆ

ಪೀಣ್ಯ ದಾಸರಹಳ್ಳಿ, ಅ. 1: ಸಿಡೇದಹಳ್ಳಿಯಲ್ಲಿರುವ ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ಅಂತರ್ ಕಾಲೇಜು ದೇಹದಾರ್ಢ್ಯ  ಪ್ರದರ್ಶನದ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸುಮಾರು 25ಕ್ಕೂ ಹೆಚ್ಚು ವಿವಿಧ ಕಾಲೇಜಿನ 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಬೆಸ್ಟ್ ಪೋಸರ್ ಆಗಿ ನ್ಯೂ ಹೊರೇಜನ್ ಕಾಲೇಜಿನ ಅಲ್ವಿನ್. ಆರ್, ಮೋಸ್ಟ್ ಮಸ್ಕ್ಯುಲರ್ ಆಗಿ  ಎ. ಐ. ಜಿ. ಕಾಲೇಜಿನ ಮೋನಿಶ್.ಎಸ್ ಹಾಗೂ ಮಿಸ್ಟರ್ ಬೆಂಗಳೂರು ವಿಶ್ವವಿದ್ಯಾಲಯವಾಗಿ  ದಿ ನ್ಯಾಷನಲ್ ಕಾಲೇಜಿನ ಹರೀಶ್.ವೈ ಬಹುಮಾನಗಳನ್ನು ಪಡೆದರು.

ವಿಜೇತರಿಗೆ ಸಂಸ್ಥೆಯ ಕಾರ್ಯನಿರ್ವಾಹಧಿಕಾರಿ  ಕೀರ್ತನ ಕುಮಾರ್ ಬಹುಮಾನ ವಿತರಿಸಿದರು. ಸಂಸ್ಥೆಯ ಪದಾಧಿಕಾರಿ ವರುಣ್ ಕುಮಾರ್ ಪ್ರಾಂಶುಪಾಲ ಡಾ. ಸುರೇಶ್ ಸಿ. ಹೆಗಡಿ, ದೈಹಿಕ ನಿರ್ದೇಶಕ ಡಾ. ಹರೀಶ್ ಪಿ.ಎಂ. ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos