ಮಾನವ ಹಕ್ಕು ಸಂರಕ್ಷಣಾ ಸಂಸ್ಥೆ ಶಾಖೆ ಉದ್ಘಾಟನೆ

  • In State
  • January 11, 2021
  • 252 Views
ಮಾನವ ಹಕ್ಕು ಸಂರಕ್ಷಣಾ ಸಂಸ್ಥೆ ಶಾಖೆ ಉದ್ಘಾಟನೆ

ನೆಲಮಂಗಲ: ನಗರದ ಡಾ.ಬಿ ಆರ್ ಅಂಬೇಡ್ಕರ್ ಭವನದಲ್ಲಿ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ನೂತನ ಶಾಖೆಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವೀಶ್ ಗೌಡರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ನೂತನ ಶಾಖೆ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ನೆರವೇರಿಸಲಾಯಿತು .
ಬಳಿಕ ಮಾತನಾಡಿದ ರವೀಶ್ ಗೌಡ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಸಂವಿಧಾನ ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಸ್ವತಂತ್ರವಾಗಿ ಸಮಾನತೆಯಿಂದ ಜೀವನ ನಡೆಸಲು ಸಹಕಾರಿಯಾಗಿದೆ.
ಇಂಥದ್ದೊಂದು ಸಂವಿಧಾನ ರಚನೆಯಾಗದಿದ್ದರೆ ಭಾರತೀಯ ಪ್ರತಿಯೊಬ್ಬ ಪ್ರಜೆಗಳಲ್ಲಿ ಸಮಾನತೆ ಐಕ್ಯತೆ ಕಾಣಲು ಸಾಧ್ಯವಾಗುತ್ತಿರಲಿಲ್ಲ.ಹೋರಾಟ ಹಾಗೂ ಚಳುವಳಿಗಳಿಂದ ಪ್ರತಿಯೊಬ್ಬರಿಗೆ ನ್ಯಾಯ ಸಿಗಲು ಸಾಧ್ಯವಾಗಿದ್ದು. ಪ್ರತಿನಿತ್ಯ ಸಂವಿಧಾನ ಓದುವ ಮೂಲಕ ದೇಶದ ಜನತೆಗೆ ಕಾನೂನಿನ ಅರಿವು ಹಾಗೂ ಸಮಾನತೆ ಮೂಡಿಸಲು ಸಹಕಾರಿಯಾಗಿದೆ.
ಯಾವುದೇ ಜಾತಿ ಭೇದವಿಲ್ಲದೆ ಸಮಾಜಕ್ಕೆ ಉತ್ತಮ ಕೆಲಸ ಕಾರ್ಯ ಮಾಡಿದಾಗ ಮಾತ್ರ ಉತ್ತಮರೆನಿಸುತ್ತಾರೆ.ಪ್ರತಿಯೊಬ್ಬರಿಗೂ ಸಂವಿಧಾನ ರಚನೆಯ ಹಾಗೂ ಕಾನೂನಿನ ಅರಿವಿದ್ದಾಗ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಸಾಧ್ಯ. ಕಾನೂನು ಒಂದೇ ನಿಜವಾದ ಅಸ್ತ್ರವಾಗಿದ್ದು ಇಡೀ ಭಾರತದ ಜನತೆಗೆ ಸಂವಿಧಾನವೆಂಬ ಸಮಾನತೆಯ ಅಸ್ತ್ರವೆಂಬ ದಾರಿ ತೋರಿದ ಮಹಾನ್ ನೇತಾರ ಡಾ.ಬಿ ಆರ್ ಅಂಬೇಡ್ಕರ್.ಸಮಾಜದಲ್ಲಿ ಮಾನವ ಯಾವ ರೀತಿ ಬದುಕಬೇಕು ಎನ್ನುವುದೇ ಮಾನವ ಹಕ್ಕುಗಳ ರಕ್ಷಣಾ ಸಂಸ್ಥೆಯ ಉದ್ದೇಶವಾಗಿದ್ದು ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos