ಫ್ಯಾಷನ್ ಡಿಸೈನಿಂಗ್ ತರಬೇತಿ ಉದ್ಘಾಟನೆ

ಫ್ಯಾಷನ್ ಡಿಸೈನಿಂಗ್ ತರಬೇತಿ ಉದ್ಘಾಟನೆ

ಬೆಂಗಳೂರು , ಡಿ. 18: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೊಮ್ಮನಹಳ್ಳಿಯ ವಲಯ ಸಿಂಗಸಂದ್ರ ವಾರ್ಡನಲ್ಲಿ  ಇಂದು ಫ್ಯಾಶನ್ ಡಿಸೈನಂಗ್ ತರಬೇತಿಯನ್ನು ಸ್ಥಳಿಯ ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಶಾಂತಾ ಬಾಬುರವರು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಅತಿ ಹೆಚ್ಚಾಗಿ ಪ್ರೀತಿಯಾಗಿರುವಂತ  ಈ ಫ್ಯಾಷನ್ ಡಿಸೈನಿಂಗ್ ಅನ್ನು ತಪ್ಪದೆ ಕಲಿತು ಕೊಂಡು  ಮುಂದಿನ ಜೀವನಕ್ಕೆ ಉಪಯೋಗಿಸಿಕೊಳ್ಳಬೇಕೆಂದು  ಈ ಸಂದರ್ಭದಲ್ಲಿ ಶಾಂತಾ ಬಾಬು ಅವರು ನುಡಿದರು. ಮಹಿಳಿಯರಿಗೆ ಹಾಗೂ ಇತರ ಯಾವುದೊ ಒಂದು ಕಾರ್ಯಕ್ರಮಕ್ಕೆ ಅಥವಾ ಶುಭ ಸಮಾರಂಭಗಳಿಗಾಗಲಿ ಅತಿ ಹೆಚ್ಚು ಆದ್ಯತೆ ನೀಡುವಂತ ಈ ಫ್ಯಾಷನ್ ಡಿಸೈನಿಂಗ್ ತರಬೇತಿ ಯನ್ನು ಕಲಿತುಕೊಂಡರೆ ಜೀವನ್ನಕೆ ಮತ್ತೊಂದು ದಾರಿಯನ್ನು ತೊರಿದಂತಾಗುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಸ್ಥಳಿಯ ಮುಖಂಡರು, ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos