ಹೂಡಿಯಲ್ಲಿ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ

ಹೂಡಿಯಲ್ಲಿ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ

 

ಮಹದೇವಪುರ , ಅ. 24: ರಾಮಮಂದಿರ ನಿರ್ಮಾಣಕ್ಕಾಗಿ  ಮಹದೇವಪುರ ಕ್ಷೇತ್ರದ ಹೂಡಿ ಗ್ರಾಮದಿಂದ ಮೊದಲ ಬಾರಿ ಪಾದಯಾತ್ರೆ ಮೂಲಕ  ಬೆಂಗಳೂರಿನಿಂದ  ಅಯೋಧ್ಯೆಗೆ ಯಶಸ್ವಿ ಕಾಲ್ನಡಿಗೆ ಜಾಥ ನಡೆಸಿ ವಾಪಸ್ ಬಂದ ತಂಡಕ್ಕೆ ಸ್ವಗ್ರಾಮ ಹೂಡಿಯಲ್ಲಿ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.

ವೈಟ್ ಫೀಲ್ಡ್ ನ ಹೂಡಿ ಗ್ರಾಮದಿಂದ ಇದೇ ಆಗಸ್ಟ್ 16 ರಂದು ಆರಂಭಿಸಿದ ಶ್ರೀರಾಮ ರಥ ಪಾದಯಾತ್ರೆ ಹೆಚ್.ಎಸ್.ಮಂಜುನಾಥ್ ನೇತೃತ್ವದಲ್ಲಿ ಮಂಜಯ್ಯ ಚಾವಡಿ, ಕೇಬಲ್ ಮಂಜುನಾಥ್, ಕೇ.ಡಿ ವೆಂಕಟೇಶ್, ರಕ್ಷಿತ್, ಮುನಿಕೃಷ್ಣ, ಅಂಜಿ ಪ್ರಾರಂಭದಿಂದ ಕೊನೆಯವರೆಗೂ ಪಾದಯಾತ್ರೆಯಲ್ಲಿ ಭಾಗವಹಿಸಿದರು.

 ಹೆಚ್.ಎಸ್.ಮಂಜುನಾಥ್  

7 ಜನರ ಗುಂಪಿನಿಂದ ‍ 67 ದಿನಗಳ ಕಾಲ ಕಾಲ್ನಡಿಗೆ ಮೂಲಕ ಸುಮಾರು 2 ಸಾವಿರ ಕಿಲೋ ಮೀಟರ್ ದೂರದ ಅಯೋಧ್ಯೆಗೆ ತಲುಪಿ ಇಲ್ಲಿನ ಇಟ್ಟಿಗೆ ಒಂದನ್ನು ರಾಮ ಮಂದಿರ ನಿರ್ಮಾಣಕ್ಕೆ ನೀಡಿದ್ದೆವೆ ಎಂದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹೋರಾಟದಲ್ಲಿ ಅನೇಕ ಸಾದು ಸಂತರನ್ನು ಭೇಟಿ  ಮಾಡಲಾಗಿದೆ, ಹೋರಾಟ ಕಾವು ಕೇವಲ ಸುಪ್ರೀಂ ಕೋರ್ಟ್ ನಿರ್ಧಾರವಲ್ಲ, ಕೋಟ್ಯಾಂತರ ಭಾರತೀಯರ ಭಾವನೆಯಾಗಿದೆ ಎಂದು ಹೇಳಿದರು.

ಅಯೋಧ್ಯೆ ದಿಂದ ಬಂದವರಿಗೆ ಹೂಡಿ , ರಾಜ್ ಪಾಳ್ಯ, ತಿಗಳಪಾಳ್ಯ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಅಭಿನಂದನೆಯನ್ನು ಮಾಡಲಾಗಿತ್ತು.ಈ ಸಂದರ್ಭದಲ್ಲಿ ಶ್ರೀನಿವಾಸ್ ರಾಜು, ಆಟೋ ಶ್ರೀನಿವಾಸ್, ರಾಜು, ಮಿಸೆ ನಾಗರಾಜು, ವಾಟರ್ ಮಂಜುನಾಥ್, ಮುರಳಿ, ಅಪ್ಪು, ಮಂಜು ಮತ್ತಿತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos