ಆರೋಗ್ಯ ನಿಮ್ಮ ಸ್ವತ್ತೇ ಹೊರತು ಬೇರೆಯವರ ಸ್ವತ್ತಲ್ಲ

ಆರೋಗ್ಯ ನಿಮ್ಮ ಸ್ವತ್ತೇ ಹೊರತು ಬೇರೆಯವರ ಸ್ವತ್ತಲ್ಲ

ಕನಕಪುರ, ಡಿ. 10: ಆರೋಗ್ಯ ಎಂಬ ಮಾತನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ, ಆರೋಗ್ಯದಿಂದಿರಬೇಕಾದರೆ ಚಲನಚಲದಿಂದಿರಬೇಕೆಂದು ರವಿಶಂಕರ್ ಗುರೂಜಿ ಆಯುರ್ವೇದ ಆಶ್ರಮದ ವೈದ್ಯ ಡಾ.ಸಿದ್ದಾರ್ಥ್  ತಿಳಿಸಿದರು.

ಕನಕಪುರ ತಾಲೂಕಿನ ಹಾರೋಹಳ್ಳಿಯ ಕಸ್ತೂರಿ ಬಾ ಶಾಲೆಯಲ್ಲಿ ಶ್ರೀ ಆಯುರ್ವೇದ ಆಸ್ಪತ್ರೆ ಹಾಗೂ ಆರ್ಟ್ ಆಫ್ ಲಿವಿಂಗ್ ಹಾರೋಹಳ್ಳಿ ತಂಡದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು  ಹಮ್ಮಿಕೊಳ್ಳಲಾಗಿತ್ತು ಕರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಷ್ಟೇ ಆಸ್ತಿವಂತರಾಗಿದ್ದರೂ ತಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಆರೋಗ್ಯ ಸಧೃಢವಾಗಿದ್ದರೇ ಮಾತ್ರ ಆ ಸಂಪತ್ತನ್ನು ಗಳಿಸಲು ಸಾಧ್ಯವಾಗುತ್ತದೆ. ಇಷ್ಟೆಲ್ಲಾ ಗೊತ್ತಿದ್ದರೂ ನಾವು ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಲೇ ಇರುತ್ತೇವೆ. ಆರೋಗ್ಯದ ಬಗೆಗಿನ ತಾತ್ಸಾರ ಸಲ್ಲದು ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಹಾಜರಿದ್ದ ಡಾ.ವಿಬ್ಬಿ ಮಾತನಾಡಿ, ಆರೋಗ್ಯ ನಮ್ಮ ಜೀವನದ ಪ್ರಮುಖ ಅಂಶವಾಗಿದೆ ನಾವು ಆರೋಗ್ಯದಿಂದಿರದಿದ್ದರೇ ಏನನ್ನೂ ಸಾಧಿಸಲು ಸಾಧ್ಯವಿಲ್ಲ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ನೈರ್ಮಲ್ಯಗೊಳಿಸಬಾರದು ನಿಮ್ಮ ಮನೆ ಖಾಲಿ ಸ್ಥಳ, ಅಂಗಳ ಮುಂತಾದ ಕಡೆಗಳಲ್ಲಿ ಬೇಡದ ಗಿಡ ಕಳೆಗಳನ್ನು ಕಿತ್ತುಹಾಕಿ ಕಸ ಕಡ್ಡಿಗಳನ್ನು ತೆಗೆದು ಶುಚಿಯಾಗಿರಿಸಿಕೊಂಡರೆ ಸೊಳ್ಳೆ ಹಾಗೂ ನೊಣಗಳ ಹಾವಳಿ ಕಡಿಮೆಯಾಗಿ ಅವುಗಳಿಂದ ಹರಡುವ ಖಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದು ಎಂದರು.

ಸುಮಾರು 500 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು.

ಕರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಎಂ.ಕೃಷ್ಣ, ಶಿಲ್ಪಾ.ಡಿ.ಎಂ. ಮತ್ತು ನಂಜುಂಡಸ್ವಾಮಿ ಹಾಗೂ ಆರ್ಟ್ ಆಫ್ ಲಿವಿಂಗ್ ಹಾರೋಹಳ್ಳಿ ತಂಡದ ವೈದ್ಯರು ಹಾಜರಿದ್ದರು.

ಕನಕಪುರ ತಾಲೂಕಿನ ಹಾರೋಹಳ್ಳಿಯ ಕಸ್ತೂರಿ ಬಾ ಶಾಲೆಯಲ್ಲಿ ಆರ್ಟ್ ಆಫ್ ಲಿವಿಂಗ್ ಹಾರೋಹಳ್ಳಿ ತಂಡದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos