“ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿ : ಕೆ.ಮಹೇಶ್ “

“ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿ : ಕೆ.ಮಹೇಶ್ “

ಚಿಂಚೋಳಿ: ಕರ್ನಾಟಕ ಸರ್ಕಾರವು ಈಗಾಗಲೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನಿಡುತ್ತಿದ್ದು ಇದರಿಂದ ಇತರೆ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈ ಆದೇಶದಿಂದ ವಿದ್ಯಾರ್ಥಿಗಳಲ್ಲಿಯೇ ತಾರತಮ್ಯವಾಗುತ್ತಿದ್ದು ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಮಾತಾನಾಡುವ ಸರ್ಕಾರ ಕೇವಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನಿಡುತ್ತಿದ್ದು ಉಳಿದ ವರ್ಗದ ವಿದ್ಯಾರ್ಥಿಗಳು  ವಿದ್ಯಾರ್ಥಿಗಳ ಮೇಲೆ ಇರಿಸು ಮುರಿಸು ಭಾವನೆಗಳು ಬೇಳೆಸಿಕೊಳ್ಳುತ್ತಿದ್ದು ಉಳಿದ ವರ್ಗದ ವಿದ್ಯಾರ್ಥಿಗಳು ಕೂಡ ಬಡವರಿದ್ದಾರೆ. ಆದ ಕಾರಣ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗದವರಿಗೆ ನಿಡುವ ಉಚಿತ ಬಸ್ ಪಾಸ್‍ನ ಅವಕಾಶ ಇತರೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಮಂಗಳವಾರ ಕರ್ನಾಟಕ ರಾಜ್ಯ ಸಾರಿಗೆ ಸಚಿವರಿಗೆ ತಾಲ್ಲೂಕು ದಂಡಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಹುಜನ ವಾಲೆಂಟಿಯರ್ ಪೋರ್ಸ ಜಿಲ್ಯಾದ್ಯಕ್ಷ ಕೆ.ಮಹೇಶ, ಅಜರೊದ್ದಿನ್ ಎಂ.ಎಂ.ಕೆ, ಪ್ರಕಾಶ ಪುಜಾರಿ, ಚಂದ್ರಕಾಂತ ಕಟ್ಟಿಮನಿ, ಶರಣು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos