ಬಾಲಕಿ ಕಣ್ಣಲ್ಲಿ ಹರಳು

ಬಾಲಕಿ ಕಣ್ಣಲ್ಲಿ ಹರಳು

ಸಿಂಧನೂರು, ಜ. 9 : 10 ವರ್ಷದ ಬಾಲಕಿಯ ಕಣ್ಣಲ್ಲಿ ಆಗಾಗ ಹರಳು ಉದುರುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ. ತಾಲೂಕಿನ ಸಾಸಲಮರಿ ಗ್ರಾಮದ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಪಾರ್ವತಿಗೆ ಎರಡು ದಿನಗಳಿಂದ ಪ್ರತಿ 20 ನಿಮಿಷಕ್ಕೊಂದು ಸಣ್ಣ ಹರಳು ಕಣ್ಣಿನಿಂದ ಉದುರುತ್ತಿದೆ.
ವೈದ್ಯ ಲೋಕ ಅಚ್ಚರಿ ಪಡುವ ಸಂಗತಿಯಾಗಿದೆ.

ಈ ವಿಷಯವನ್ನು ಮೊದಲು ಶಿಕ್ಷಕರಿಗೆ ತಿಳಿಸಿದಾಗ ಅವರು ನಂಬಿರಲಿಲ್ಲ. ಪರೀಕ್ಷಿಸಿದ ಮೇಲೆ ಸತ್ಯ ಗೊತ್ತಾಗಿದೆ.
ಪಾಲಕರೊಂದಿಗೆ ಶಿಕ್ಷಕರು ಸೇರಿ ಸಿಂಧನೂರಿಗೆ ತೆರಳಿ, ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ. ಬಾಲಕಿ ಕಣ್ಣಿನಲ್ಲಿ ಹರಳು ಬರುತ್ತಿರುವ ಸುದ್ದಿಯಿಂದ ಹಲವರು ಅಚ್ಚರಿ ಪಡುತ್ತಿದ್ದಾರೆ. ಆದರೆ ಆತಂಕವು ಪಡುವ ಅಗತ್ಯವಿಲ್ಲ. ಪರೀಕ್ಷಿಸಿದ ಮೇಲೆ ಕಾರಣ ತಿಳಿದುಬರಲಿದೆ ಎಂದು ನೇತ್ರ ತಜ್ಞ ಡಾ.ಚನ್ನನಗೌಡ ಆರ್.ಪಾಟೀಲ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos