ಉಪ್ಪಿಯಿಂದ ಜನನಾಯಕರಿಗೆ ನೇರ ಪ್ರಶ್ನೆ..!

ಉಪ್ಪಿಯಿಂದ ಜನನಾಯಕರಿಗೆ ನೇರ ಪ್ರಶ್ನೆ..!

ಏ.6: ಕೊರೋನಾ ವೈರಸ್ : ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ದೇಶಾದ್ಯಂತ 21 ದಿನಗಳ ಲಾಕ್​ಡೌನ್ ಘೋಷಿಸಲಾಗಿದೆ. ಆದರೂ ದಿನ ಕಳೆದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಾ ಸಾಗುತ್ತಿದೆ  ಭಾರತದಲ್ಲಿ ಈ ಮಹಾಮಾರಿಗೆ 83 ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 3 ಸಾವಿರವನ್ನು ದಾಟಿದೆ. ಇದರ ನಡುವೆ ರಾಜಕೀಯ ನಾಯಕರ ಕೆಲ ನಡೆಗಳ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ.

ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕರಾಗಿರುವ ಉಪೇಂದ್ರ ಅವರು ಸಿನಿರಂಗದಲ್ಲಿ ಅಲ್ಲದೆ ರಾಜಕೀಯದಲ್ಲೂ ಸಕ್ರೀಯವಾಗಿದ್ದಾರೆ. ರಾಜಕೀಯ ಬದಲಾಗಿ ಪ್ರಜಾಕೀಯ ತತ್ವದೊಂದಿಗೆ  upp ಪಕ್ಷ  ಈ ಹಿಂದೆ ಚುನಾವಣೆ  ಎದುರಿಸಿತ್ತು.  ಇದೀಗ  ಕೊರೋನಾ  ಭೀತಿ  ಹಿನ್ನೆಲೆಯಲ್ಲಿ ರಾಜಕೀಯ ನಾಯಕರಿಗೆ ಉಪ್ಪಿ ನೇರ ಪ್ರಶ್ನೆಯೊಂದನ್ನು ಎಸೆದಿದ್ದಾರೆ.

ಎಲ್ಲ ಜನನಾಯಕರಿಗೆ ಒಂದು ನೇರ ಪ್ರಶ್ನೆ…..ಕೊರೋನಾ ಮುಕ್ತ ಭಾರತ ಎಂದು ಯಾವಾಗ ಘೋಷಿಸುವಿರಿ?. ನೂರಾ ಮೂವತ್ತು ಕೋಟಿ ಜನರನ್ನೂ ತಪಾಸಣೆ ಮಾಡಿದ ನಂತರವೇ?. ಅಲ್ಲಿಯವರೆಗೂ ಲಾಕ್​ಡೌನ್​ ಮುಂದುವರೆಯುವುದೇ? ಅದಕ್ಕೆ ಮುಂಚೆ ಲಾಕ್​ಡೌನ್​ ತೆರವು ಮಾಡಿದರೆ ಪ್ರಜೆಗಳಿಗೆ ಅಪಾಯವಲ್ಲವೇ? ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಉಪೇಂದ್ರ ಅವರು ಪ್ರಶ್ನಿಸಿದ್ದಾರೆ.

ಏಪ್ರಿಲ್ 14 ರ ಬಳಿಕ ಲಾಕ್​ಡೌನ್ ಮುಂದುವರೆಯಲಿದೆಯಾ? ಅಥವಾ ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯಾ ಎಂಬಿತ್ಯಾದಿ ಜನ ಸಾಮಾನ್ಯರ ಪ್ರಶ್ನೆಗೆ ಯಾವುದೇ ಸರ್ಕಾರಗಳು ಉತ್ತರಿಸುತ್ತಿಲ್ಲ. ಈ

ಹಿನ್ನೆಲೆಯಲ್ಲಿ ಉಪೇಂದ್ರ ಅವರೇ  ಜನಪ್ರತಿನಿಧಿಗಳ ಮುಂದೆ ಪ್ರಶ್ನೆಯಿಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos