ಪತ್ರರ್ಕರಿಗೆ ಆರೋಗ್ಯ ಕಿಟ್ ವಿತರಣೆ

  • In State
  • August 5, 2020
  • 200 Views
ಪತ್ರರ್ಕರಿಗೆ ಆರೋಗ್ಯ ಕಿಟ್ ವಿತರಣೆ

ಮಾಲೂರು:ಕೋವಿಡ್-೧೯ ವಾರಿಯರ್ಸ್ಗಳಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರ ಆರೋಗ್ಯದ ಹಿತದೃಷ್ಠಿಯಿಂದ  ಆಯುಷ್ ಆಸ್ಪತ್ರೆ ವತಿಯಿಂದ  ಆಯುಷ್ ಕಿಟ್‌ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದು ಕೇರಾ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಪಿ.ಎನ್.ದಾಸ್ ಹೇಳಿದರು.

ಪಟ್ಟಣದ ಕೃಷಿಕ ಸಮಾಜ ಸಭಾಂಗಣದಲ್ಲಿ ತಾಲೂಕು ಆಯುಷ್ ಆಸ್ಪತ್ರೆಯ ವತಿಯಿಂದ ಹಮ್ಮಿಕೊಂಡಿದ್ದ ಪತ್ರಕರ್ತರಿಗೆ ಆರೋಗ್ಯ ಕಿಟ್‌ಗಳ ವಿತರಣೆ ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತಾಲೂಕು ಆಯುಷ್ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ನಾಗಪದ್ಮ ಮಾತನಾಡಿ, ಕೋರೋನಾ ವಾರಿರ‍್ಸ್ಗಳಂತೆ ಪತ್ರಕರ್ತರು ಸಹ ಹೆಚ್ಚಿನ ಜವಾಬ್ದಾರಿ ವಹಿಸಿ ಕೋವಿಡ್-೧೯ ಬಗ್ಗೆ ಸಾರ್ವಜನಿಕರಿಗೆ ಪ್ರತಿನಿತ್ಯ ಪತ್ರಿಕೆಗಳಲ್ಲಿ ಅರಿವು, ಜಾಗೃತಿ ಮೂಡಿಸುತ್ತಿದ್ದಾರೆ. ಕೇಂದ್ರ ಸರಕಾರದ ಯೋಜನೆಯಾದ  ಅಯುಷ್ ಆಸ್ಪತ್ರೆ ವತಿಯಿಂದ ಅಯುಷ್ ಕಿಟ್‌ಗಳನ್ನು ವಿತರಿಸಲಾಗುತ್ತದೆ. ಕರೋನಾ ಸೊಂಕು ಪ್ರತಿಯೊಬ್ಬರಿಗೂ ಹರಡುತ್ತದೆ.

ಸೊಂಕಿಗೆ ಜಾತಿ ಬೇದ, ಆಸ್ತಿ ಹಂತಸ್ತು ಎಂಬ ಭೇದ ಭಾವವಿಲ್ಲ. ಸಾರ್ವಜನಿಕರು ಭಯ ಪಡೆದೆ ಆತ್ಮಸ್ಥೈರ್ಯದಿಂದ ರೋಗವನ್ನು ನಿಯಂತ್ರಿಸಲು ಮುಂದಾಗಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ತಮ್ಮ ಕೈಗಳಿಂದ ಸ್ಯಾನಿಟರ್ ಹಾಗೂ ಸೋಪಿನಿಂದ ಕೈ ತೊಳದುಕೊಂಡು ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಬಿಸಿ ನೀರು, ಪೌಷ್ಠಿಕ ಆಹಾರ ಸೇವಿಸಿ ಆಯುರ್ವೇದಿಕ್ ಔಷಧಿಯನ್ನು ಬಳಸಿವ ರೋಗ ನಿರೋಧಕ್ಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಪತ್ರಕರ್ತರಿಗೆ  ಮಾಹಿತಿ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos