ಬಿಬಿಎಂಪಿ ಕಲ್ಯಾಣ ಯೋಜನೆಯಡಿ “ಫ್ಯಾಷನ್ ಡಿಸೈನಿಂಗ್” ತರಬೇತಿ

ಬಿಬಿಎಂಪಿ ಕಲ್ಯಾಣ ಯೋಜನೆಯಡಿ “ಫ್ಯಾಷನ್ ಡಿಸೈನಿಂಗ್” ತರಬೇತಿ

ಬೊಮ್ಮನಹಳ್ಳಿ, ಡಿ. 11: ಮಹಿಳೆಯರು ಸಬಲೀಕರಣಗೊಳ್ಳುವುದು ಬಹುಮುಖ್ಯವೆಂದ ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಎಂ. ರಾಮಕೃಷ್ಣ ತಿಳಿಸಿದರು.

ಇಂದು ಬೊಮ್ಮನಹಳ್ಳಿ ಬಿಬಿಎಂಪಿ ವಾಣಿಜ್ಯ ಸಂಕೀರ್ಣದಲ್ಲಿ ಕಲ್ಯಾಣ ಯೋಜನೆಯಡಿ ಶ್ರೀ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ಆಯೋಜಿಸಿದ್ದ “ಫ್ಯಾಷನ್ ಡಿಸೈನಿಂಗ್” ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಬಿಬಿಎಂಪಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಆ ಪೈಕಿ ಫ್ಯಾಷನ್ ಡಿಸೈನಿಂಗ್ ತರಬೇತಿಯು ಪ್ರಮುಖವಾದುದ್ದು. ಇತ್ತೀಚೆಗೆ ದಿನಗಳಲ್ಲಿ ಹೆಣ್ಣು ಮಕ್ಕಳು ಫ್ಯಾಷನ್ ಬಗ್ಗೆ ಹೆಚ್ಚು ಆಸಕ್ತರಾಗಿದ್ದು, ಸಾವಿರಾರು ರೂಪಾಯಿ ಹಣ ಸುರಿದು ಆರ್ಟಿಫಿಷಿಯಲ್ ಜ್ಯುವೆಲರಿಗಳನ್ನು ಖರೀದಿಸುತ್ತಾರೆ. ಸ್ವಯಂ ಉದ್ಯೋಗದಡಿ ನಿರುದ್ಯೋಗಸ್ಥ ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಣ್ಣು ಮಕ್ಕಳಿಗಾಗಿ ಈ ಯೋಜನೆ ರೂಪುಗೊಂಡಿದೆ ಎಂದರು.

ಇತ್ತೀಚೆಗೆ ಒಂದು ಬ್ಲೌಸ್ ಡಿಸೈನ್‌ಗೆ ಸಾವಿರಾರು ಹಣ ಸುರಿಯುವ ಹೆಣ್ಣು ಮಕ್ಕಳ ಸೀರೆ ಕುಚ್ಚಿಗೂ ಹೆಚ್ಚು ಹಣ ನೀಡುತ್ತಾರೆ. ಸೀರೆ ಕುಚ್ಚು, ಆರ್ಟಿಫಿಷಿಯಲ್ ಓಲೆ, ಸರ, ಬಳೆಗಳು ಇನ್ನಿತರೇ ಕ್ರಾಫ್ಟ್ ಸಂಬಂಧಿತ ಹಾಗೂ ಕಸವೆಂದು ಆಚೆ ಹಾಕುವ ವಸ್ತುಗಳಿಂದಲೂ ಹೇಗೆ ಸುಂದರ ವಸ್ತುಗಳನ್ನು ತಯಾರಿಸಬಹುದೆಂಬ ಬಗ್ಗೆ ತರಬೇತಿಯನ್ನು ನೀಡಲಾಗುವುದೆಂದು ಶ್ರೀ ಇನ್ಸ್ಟ್ಯೂಟ್ ಆಫ್ ಸಂಸ್ಥೆಯ ಮುಖ್ಯಸ್ಥ ಸ್ವಾಮಿಯವರು ಫಲಾನುಭವಿಗಳನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಲ್ಯಾಣಾಧಿಕಾರಿ ಶ್ರೀನಿವಾಸ್, ಕೇಸ್ ವಕರ್ ಶಿವಲೀಲಾ, ಶೋಭಾ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಬಿಕಾ, ತರಬೇತಿ ಶಿಕ್ಷಕಿ ಕವಿತಾ ಹಾಗೂ ತರಬೇತಿಯ ಫಲಾನುಭವಿಗಳು ಭಾಗವಹಿಸಿದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos