ಸಂಜೆ ಸ್ನ್ಯಾಕ್ಸ್ ಗೆ ಸ್ಯಾಂಡ್ ವಿಚ್

ಸಂಜೆ ಸ್ನ್ಯಾಕ್ಸ್ ಗೆ ಸ್ಯಾಂಡ್ ವಿಚ್

ಮೇ. 19 : ಸಂಜೆ ಟೀ ಜತೆ ಏನಾದರೂ ತಿನ್ನಬೇಕು ಅನಿಸುತ್ತದೆ. ಹಾಗಾದ್ರೆ ತಡವೇಕೆ ಮನೆಯಲ್ಲಿ ಬ್ರೆಡ್ ಇದ್ದರೆ ರುಚಿಕರವಾದ ಬ್ರೆಡ್ ಸ್ಯಾಂಡ್ ವಿಚ್ ಮಾಡಿನೋಡಿ. ಮಕ್ಕಳು ಕೂಡ ಖುಷಿಯಿಂದ ಇದನ್ನು ಸವಿಯುತ್ತಾರೆ.
ಬೇಕಾಗುವ ಸಾಮಾಗ್ರಿಗಳು:
ಬ್ರೆಡ್ ಪೀಸ್ – 6, ಎಣ್ಣೆ – 2 ಟೇಬಲ್ ಸ್ಪೂನ್, ಜೀರಿಗೆ – 1/2 ಟೀ ಸ್ಪೂನ್, ಪಾಲಕ್ ಎಲೆ – 2 ಕಪ್ ಕತ್ತರಿಸಿದ್ದು, ಸ್ವೀಟ್ ಕಾರ್ನ್ – 1/2 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಕಾಳುಮೆಣಸಿನ ಪುಡಿ – 1/2 ಟೀ ಸ್ಪೂನ್, ಮೈದಾ ಹಿಟ್ಟು – 1 ಟೇಬಲ್ ಸ್ಪೂನ್, ಹಾಲು – 1/2 ಕಪ್, ತುರಿದ ಚೀಸ್ – 1/4 ಕಪ್, ಬೆಣ್ಣೆ – ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದು ಬಿಸಿಯಾಗುತ್ತಲೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ಹಾಕಿ ಚಟಪಟ ಅನ್ನುವಾಗ ಪಾಲಕ್ ಸೊಪ್ಪು ಹಾಕಿ 2 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ನಂತರ 1 ಟೇಬಲ್ ಸ್ಪೂನ್ ಮೈದಾ ಹಿಟ್ಟು ಹಾಕಿ 2 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ½ ಕಪ್ ಹಾಲು ಸೇರಿಸಿ ಚೆನ್ನಾಗಿ ಕೈಯಾಡಿಸಿ. ನಂತರ ಉಪ್ಪು, ಕಾಳುಮೆಣಸಿನಪುಡಿ ಸೇರಿಸಿ 4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಇದಕ್ಕೆ ತುರಿದ ಚೀಸ್ ಸೇರಿಸಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ.
ಬಳಿಕ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ ಸ್ವಲ್ಪ ಬೆಣ್ಣೆ ಹಾಕಿಕೊಳ್ಳಿ. ಬ್ರೆಡ್ ಪೀಸ್ ನ ಒಂದು ಬದಿಗೆ ಮಾಡಿಟ್ಟುಕೊಂಡ ಮಿಶ್ರಣವನ್ನು ಸ್ವಲ್ಪ ಹಾಕಿ ಎಲ್ಲಾ ಕಡೆ ಹಚ್ಚಿಕೊಳ್ಳಿ. ನಂತರ ಇನ್ನೊಂದು ಬ್ರೆಡ್ ಪೀಸ್ ಅನ್ನು ಅದಕ್ಕೆ ಅಟ್ಟಿಸಿ ಬಿಸಿಯಾದ ತವಾದ ಮೇಲೆ ಇಟ್ಟು ಎರಡು ಕಡೆ ಕಂದುಬಣ್ಣ ಬರುವವರೆಗೆ ಹುರಿದುಕೊಳ್ಳಿ.

ಫ್ರೆಶ್ ನ್ಯೂಸ್

Latest Posts

Featured Videos