ಪೊಲೀಸ್ ಠಾಣೆ ಮೆಟ್ಟಿಲೇರ್ತಾರ ದುನಿಯಾ ವಿಜಿ!?

ಪೊಲೀಸ್ ಠಾಣೆ ಮೆಟ್ಟಿಲೇರ್ತಾರ ದುನಿಯಾ ವಿಜಿ!?

ಬೆಂಗಳೂರು, ಜ. 20: ಸಾಮಾನ್ಯವಾಗಿ ಐದು ಇಂಚಿಗೂ ಉದ್ದದ ಕತ್ತಿಯನ್ನ  ಬಳಸುವಂತಿಲ್ಲ, ಇಟ್ಟುಕೊಳ್ಳುವಂತಿಲ್ಲ ಹಾಗೇನಾದ್ರೂ ಕತ್ತಿ ಇಟ್ಟುಕೊಳ್ಳಬೇಕಿದ್ರೇ, ಲೆಸೆನ್ಸ್ ಪಡೆಯಬೇಕು. ಲೆಸೆನ್ಸ್ ಪಡೆಯದೇ ಆಯುಧ ಇಟ್ಟುಕೊಂಡ್ರೇ ಅಥ್ವಾ ಬಳಸಿದ್ರೇ ಕಾನೂನು ಬಾಹಿರ. ಪೊಲೀಸರು ಅಂತಹವರ ವಿರುದ್ಧ ಆರ್ಮ್ಸ್ ಆಕ್ಟ್ ಅಡಿ ಕೇಸ್ ಬುಕ್ ಮಾಡ್ತಾರೇ.  ಹೌದು, ಸದ್ಯ ಗಿರಿನಗರ ಪೊಲೀಸರಿಂದ ದುನಿಯಾ ವಿಜಿ ಕೇಕ್ ಕಟ್ ಮಾಡಿರೋ ವಿಡಿಯೋ ಪರಿಶೀಲನೆ ಮಾಡಿದ್ದಾರೆ.

‘ದುನಿಯಾ’ ಚಿತ್ರದ ಮೂಲಕ ನಾಯಕನಟರಾಗಿ ಎಂಟ್ರಿ ಕೊಟ್ಟ ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು 46ನೇ ವಸಂತಕ್ಕೆ ಕಾಲಿಟ್ಟಿರುವ ಅವರಿಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಸಹ ಶುಭ ಹಾರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಬೆಂಗಳೂರಿನ ಕತ್ರಿಗುಪ್ಪೆ ಬಳಿ ಇರುವ ಅವರ ನಿವಾಸದಲ್ಲಿ, ವಿಜಯ್ ತಮ್ಮ ಅಭಿಮಾನಿಗಳ ಜೊತೆ ರಾತ್ರಿ ಹುಟ್ಟುಹಬ್ಬ ಆಚರಿಸಿಕೊಂಡರು.

ಹೀಗೆ, ವಿಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ವೇಳೆ ತಲ್ವಾರ್ ನಿಂದ ಬರ್ತಡೇ ಕೇಕ್ ಅನ್ನು ಕತ್ತರಿಸುವ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ. ಏಕೆಂದರೆ ಯಾವುದೇ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ ಮತ್ತು ಪ್ರದರ್ಶಿವಂತಿಲ್ಲ. ಇದು ಆರ್ಮ್ಸ್ ಆಕ್ಟ್ ಆಡಿ ಅಪರಾಧವಾಗುತ್ತದೆ. ಹೀಗಾಗಿ ಡಿಸಿಪಿ ರೋಹಿಣಿ ಅವರು ತನಿಖೆ ನಡೆಸುವಂತೆ ಗಿರಿನಗರ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಹಾಗೆಯೇ ಕೇಕ್ ಕತ್ತರಿಸಿರುವ ಕತ್ತಿ ಐದು ಇಂಚಿಗೂ ಉದ್ದ ಇರುವುದು ಖಚಿತವಾದರೆ ಕೇಸ್ ಬುಕ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos