ರಸ್ತೆ ನಿಯಮ ಪಾಲನೆ ಮಾಡಣ್ಣ

ರಸ್ತೆ ನಿಯಮ ಪಾಲನೆ ಮಾಡಣ್ಣ

ಹುಬ್ಬಳ್ಳಿ, ಜ. 22: ರಸ್ತೆ ನಿಯಮ ಪಾಲನೆ ಮಾಡಣ್ಣ, ಜೀವ ಉಳಿವುದು ನೋಡಾ…

ಜೀಬ್ರಾ ಕ್ರಾಸಲಿ ನಡಿಯೋಣು ಬಾರಾ

ಫುಟ್ ಪಾತ್ ಮೇಲೇ ಹೋಗೋಣ ಬಾರಾ ರಸ್ತೆ ನಿಯಮ ಪಾಲನೆ ಮಾಡಾ

ನಿನ್ನ ಜೀವ ನಿನ್ನ ಕೈಯಾಗ ನೋಡಾ…….

ನಗರದ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಇಂದು ಬೆಳಿಗ್ಗೆ ಮೊಳಗಿದ ಸುಶ್ರಾವ್ಯವಾದ ರಸ್ತೆ ಸುರಕ್ಷತಾ ಜಾಗೃತಿ ಗೀತೆಗಳು  ಸಾರ್ವಜನಿಕರು, ದ್ಯಾರ್ಥಿಗಳು, ವಾಹನ ಸವಾರರು ಮತ್ತು ಪಾದಚಾರಿಗಳ ಮನಸೆಳೆದವು.

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾಡಳಿತ, ಸಾರಿಗೆ, ಪೊಲೀಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹುಬ್ಬಳ್ಳಿ ಧಾರವಾಡ ಮೋಟಾರು ವಾಹನ ತರಬೇತಿ ಶಾಲೆಗಳ  ಸಹಯೋಗದಲ್ಲಿ ಇಂದು 31 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಗವಾಗಿ ಏರ್ಪಡಿಸಿದ್ದ ಬೀದಿನಾಟಕ ಮತ್ತು ಜಾಗೃತಿ ಗೀತೆಗಳ ಕಾರ್ಯಕ್ರಮದಲ್ಲಿ ಕುಂದಗೋಳ ತಾಲೂಕಿನ ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಮತ್ತು ಜನಪದ ಫೌಂಡೇಶನ್ ಕಲಾವಿದರು ಪ್ರದರ್ಶಿಸಿದ ನಾಟಕ ಹಾಗೂ ಗೀತೆಗಳು ಜನರ ಮನಮುಟ್ಟಿದವು.

ರಸ್ತೆ ರಸ್ತೆ ಇರಲಿ ನಮಗೆ ಸುರಕ್ಷೆ

ನಾನು ನೀನು ಅವನು ಇವನು

ಮಾಡಲಿ ನಿಯಮ ಪಾಲನೆ

ಹೆಲ್ಮೆಟ್ ನ್ನು ಹಾಕಿ ಬೈಕನು ನೀನು ಓಡಿಸು

ಸರಾಯಿ ಕುಡಿದು ಮೊಬೈಲ್ ಹಿಡಿದು ಓಡಿಸಬೇಡಿ ಗಾಡಿಯ…..

ಎಂಬ ಗೀತೆಯು ನೆರೆದ ಜನರು, ಪೊಲೀಸ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೇರಿದಂತೆ ಎಲ್ಲರನ್ನೂ ತಲೆದೂಗುವಂತೆ ಮಾಡಿದವು.

ನಿಧಾನವೇ ಪ್ರಧಾನ ಶೀರ್ಷಿಕೆಯ ಬೀದಿನಾಟಕವು ಸ್ಥಳೀಯ ಭಾಷಾ ಶೈಲಿ ಮತ್ತು ನೈಜ ಅಭಿನಯದ ಮೂಲಕ ಸರಕು ಸಾಗಣೆ ವಾಹನಗಳಲ್ಲಿ ಜನರ ಪ್ರಯಾಣ ಕಾನೂನು ಬಾಹಿರವಾದುದು ಮತ್ತು ಅಪಾಯಕಾರಿ ಎಂಬ ಅಂಶಗಳನ್ನು ಪರಿಣಾಮ ಕಾರಿಯಾಗಿ ಜನರಿಗೆ ತಲುಪಿಸಿತು.

ಹರ್ಲಾಪುರದ ಎಸ್.ಎಸ್.ಹಿರೇಮಠ, ಈಶ್ವರ ಅರಳಿ, ಚಂದ್ರಶೇಖರ ಕಾಳೆ, ಪ್ರಕಾಶ ದೊಡ್ಡೂರ, ಮಲ್ಲೇಶ ಮುಳಗುಂದ, ಶಿವಪ್ಪ ಡಂಬಳ, ನಾಗರಾಜ ಗೌಡಣ್ಣವರ್, ಶರೀಫ್ ದೊಡ್ಡಮನಿ, ಅನ್ನಪೂರ್ಣ ಮಡಿವಾಳರ ಸೇರಿದಂತೆ ಹಲವಾರು ಕಲಾವಿದರ ಹಾಡು, ಅಭಿನಯ ಜನರ ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾದವು.

ಫ್ರೆಶ್ ನ್ಯೂಸ್

Latest Posts

Featured Videos