ಸರ್ಕಾರಿ ಆಸ್ಪತ್ರೆ ಕಡೆಗೆ ಮುಖ ಮಾಡುತ್ತಾರಾ?

  • In State
  • August 10, 2020
  • 197 Views
ಸರ್ಕಾರಿ ಆಸ್ಪತ್ರೆ ಕಡೆಗೆ ಮುಖ ಮಾಡುತ್ತಾರಾ?

ಗದಗ : ಜಿಲ್ಲೆಯ ದೊಡ್ಡದೊಡ್ಡ ಹುದ್ದೆಯಲ್ಲಿರುವವರು, ಕೈತುಂಬ ಸಂಬಳ ತೆಗೆದುಕೊಳ್ಳುವವರು, ಶ್ರೀಮಂತರು ಸರ್ಕಾರಿ ಆಸ್ಪತ್ರೆ ಕಡೆಗೆ ಮುಖ ಮಾಡುತ್ತಾರಾ? ಖಂಡಿತ ಇಲ್ಲ. ಅನಾರೋಗ್ಯ ಉಂಟಾದಾಗ ಜೇಬು ತುಂಬಿರುವವರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಆದರೆ, ಇದಕ್ಕೆ ಅಪವಾದಎನ್ನುವಂತೆ ಜಿಲ್ಲಾಧಿಕಾರಿಯೊಬ್ಬರುತಮ್ಮ ಪತ್ನಿಯ ಹೆರಿಗೆಯನ್ನು ಸರ್ಕಾರಿಆಸ್ಪತ್ರೆಯಲ್ಲಿ ನೆರವೇರಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಜಿಲ್ಲೆಯ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಅವರು ತಮ್ಮ ಪತ್ನಿ ಹೆರಿಗೆಯನ್ನು ಭಾನುವಾರ ನಗರದ ಕೆಸಿ ರಾಣಿ ರಸ್ತೆ ಯದುಂಡಪ್ಪ ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೇ ಮಾಡಿಸಿ ಸರಳತೆ ಮೆರೆದಿದ್ದಾರೆ. ಈ ಮೂಲಕ ಸರ್ಕಾರಿ ಆಸ್ಪತ್ರೆಯಲ್ಲಿಯೂ ನುರಿತ ವೈದ್ಯರಿದ್ದಾರೆ. ಉತ್ತಮ ವೈದ್ಯಕೀಯ ಸೌಲಭ್ಯದೊರೆಯುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ವೈದ್ಯರ ಸಲಹೆ ಮೇರೆಗೆ ಹೆರಿಗೆಯ ದಿನ ಹತ್ತಿರವಾಗುತ್ತಿದ್ದಂತೆಯಾವುದೇ ಖಾಸಗಿ ಆಸ್ಪತ್ರೆಅಥವಾ ಮತ್ತಾವುದೇ ಮಲ್ಟಿ ಸ್ಪೆಷಾಲಿಟಿಆಸ್ಪತ್ರೆಗೆ ಹೋಗದೆ ಸರ್ಕಾರಿಆಸ್ಪತ್ರೆಯಲ್ಲಿತಮ್ಮ ಪತ್ನಿಯನ್ನು ದಾಖಲಿಸಿದ್ದಾರೆ. ಭಾನುವಾರ ಬೆಳಗಿನಜಾವ ಮಹಿಳಾ ವೈದ್ಯರಾದಡಾ.ಜಯಶ್ರೀ ಮತ್ತುಡಾ.ಶೃತಿ ನೇತೃತ್ಬದಲ್ಲಿ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಮುದ್ದಾದಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos