ಬಡವರಿಗೆ ಶಾಸಕರಿಂದ ಫುಡ್ ಕಿಟ್ ವಿತರಣೆ

ಬಡವರಿಗೆ ಶಾಸಕರಿಂದ ಫುಡ್ ಕಿಟ್ ವಿತರಣೆ

ಬೆಂಗಳೂರು : ಬೊಮ್ಮನಹಳ್ಳಿ ಸರ್ಕಾರ ಕೈಜೋಡಿಸಿದರೆ ಇನ್ನಷ್ಟು ಬಡವರಿಗೆ ಸಹಾಯವಾಗುತ್ತದೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ತಿಳಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ವಲಸಿಗರು ಹಾಗು ನಿರ್ಗತಿಕರಿಗೆ ಆಹಾರದ ವಿತರಣೆ ಮಾಡಿ ಕಳೆದ ವರ್ಷ ಸಂಕಷ್ಟದಿಂದ  75 ಸಾವಿರ ಕುಟುಂಬಗಳಿಗೆ ಆಹಾರಧಾನ್ಯದ  ಕಿಟ್‌ಗಳನ್ನು ವಿತರಿಸಿದರು.

ಈ ಬಾರಿಯೂ 60.000 ಕುಟುಂಬಗಳಿಗೆ ಆಹಾರದ ವಿತರಣೆ ಮಾಡುತ್ತಿದ್ದೇನೆ, ಕಳೆದ ಬಾರಿ ಬಿಬಿಎಂಪಿ ವತಿಯಿಂದ 25 ಸಾವಿರ ಕಿಟ್‌ಗಳನ್ನು ನೀಡಲಾಗಿತ್ತು. ಆದರೆ ಈ ಬಾರಿ ಇನ್ನು ನಿರಾಶ್ರಿತರಿಗೆಗಳನ್ನು ನೀಡಲು ಯಾವುದೇ ಪ್ರಯೋಜನವಾಗಿಲ್ಲ ಆದಷ್ಟು ಬೇಗನೆ ಸರ್ಕಾರ ಇದರ ಬಗ್ಗೆ ಯೋಚನೆ ಮಾಡಿ ಮಾಡಬೇಕು ಎಂದು ಮನವಿ ಮಾಡಿದರು.

ನನ್ನ ಕ್ಷೇತ್ರದಲ್ಲಿ ಬಹಳಷ್ಟು ವಲಸೆ ಕಾರ್ಮಿಕರು ದಿನಗೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿದ್ದು, ಅವರು ಬಹಳಷ್ಟು ಸಂಕಷ್ಟದಲ್ಲಿರುವುದನ್ನ ಮನಗೊಂಡು ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಶಾಸಕರಾದವರು ಕ್ಷೇತ್ರದಲ್ಲಿ ರಸ್ತೆ ಮೂಲಭೂತ ಸೌಕರ್ಯಗಳನ್ನು ಮಾಡಿಸುವುದು ಮಾತ್ರವಲ್ಲ, ಆಯಾ ಕ್ಷೇತ್ರದ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಜಾಗೃತಿ  ಮೂಡಿಸಬೇಕು ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಅವರಿಗೆ ಆಸ್ಪತ್ರೆಗೆ ಸೇರಿಸುವುದು ಔಷಧಿಗಳು ಕಿಟ್ ನೀಡುವ ಕೆಲಸ ಮಾಡಬೇಕು ಅದರಂತೆ ಕ್ಷೇತ್ರದಲ್ಲಿ ವಾಸಿಸುವ ಜನರಿಗೆ ಇಂತಹ ಸಂಕಷ್ಟ ಕಾಲದಲ್ಲಿ ಸಹಸ್ರಾರು ಕೊರೋನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ, ಮನೆಯವರಿಗೆ ಔಷಧಿಗಳನ್ನು ನೀಡುವಂತಹ ಕೆಲಸ ಮಾಡಿದ್ದೇನೆ. ಜನರ ಸೇವೆನಿಂದ ನನಗೆ ಬಹಳಷ್ಟು ಸಂತೃಪ್ತಿ ತಂದಿದೆ ಎಂದು ತಿಳಿಸಿದರು.

ಬಳಿಕ ಬಿಬಿಎಂಪಿ ಸದಸ್ಯ ಮಾತನಾಡಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ರೆಡ್ಡಿ ಅವರು ಕಳೆದ ವರ್ಷದಂತೆ ಈ ವರ್ಷವೂ 60 ಸಾವಿರಕ್ಕೂ ಹೆಚ್ಚು ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯಗಳನ್ನು ವಿತರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬಹಳಷ್ಟು ಮಂದಿಗೆ ಆಸ್ಪತ್ರೆ ವೆಚ್ಚ ಭರಿಸುವುದು ಹಾಗೂ ಬಡವರಿಗೆ ಆಸ್ಪತ್ರೆಗೆ ಸೇರಿಸುವುದು ಕುಟುಂಬದವರಿಗೆ ಔಷಧಿಗಳು ನೀಡುವ ಕೆಲಸ ಮಾಡಿದ್ದಾರೆ. ನಮ್ಮ ಶಾಸಕರು ನಮ್ಮ ಹೆಮ್ಮೆ ಎಂಬುದನ್ನು ರುಜುವಾತು ಮಾಡಿದ್ದಾರೆ ಎಂದು ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos