ಕರೋನಾ ವೈರಸ್ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡನಾ?

ಕರೋನಾ ವೈರಸ್ ಭಯಕ್ಕೆ ಆತ್ಮಹತ್ಯೆ ಮಾಡಿಕೊಂಡನಾ?

ಚಿತ್ತೂರ್, ಫೆ. 12: ಇತ್ತೀಚಿನ ದಿನಗಳಲ್ಲಿ ಕರೋನಾ ವೈರಸ್  ಇಡಿ ವಿಶ್ವವನ್ನೇ ಬೆಚ್ಚಿಬೀಳಿಸುತ್ತಿದೆ. ಹೌದು ಕರೋನಾ ವೈರಸ್ನಿಂದ ಹಲಾವಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ವ್ಯಕ್ತಿ ಒಬ್ಬ ತನಗೆ ಕರೋನಾ ವೈರಸ್   ಇದೆ ಎಂದು ತಿಳಿದು ಊರನ್ನು ರಕ್ಷಿಸಲು ತನ್ನ ಪ್ರಾಣವನ್ನು ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ.

ಬಾಲಕೃಷ್ಣ(50) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶೇಷಮ್ನಾಯುದಕಂಡ್ರಿಗ ಗ್ರಾಮದ ನಿವಾಸಿಯಾಗಿರುವ ಬಾಲಕೃಷ್ಣ ಹೃದಯ ಬಡಿತದ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲು ತಿರುಪತಿಯ ರುಯಾ ಆಸ್ಪತ್ರೆಗೆ ತೆರಳಿದ್ದರು.

ವೈದ್ಯರು ಬಾಲಕೃಷ್ಣ ಅವರ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಯಾವುದೋ ವೈರಸ್ನ ಲಕ್ಷಣ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಬಾಲಕೃಷ್ಣ ಅವರು 2 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪೆಡೆದಿದ್ದರು.

ಆತನಿಗೆ ವೈದ್ಯರು ಯಾವುದೇ ಸೋಂಕಿನಿಂದ ಪಾರಾಗಲು ಮಾಸ್ಕ್ ಧರಿಸುವಂತೆ ಸೂಚಿಸಿದ್ದರು. ಆದರೆ ತನಗೆ ಕೊರೊನಾ ವೈರಸ್ ಇದೆಯೆಂದು ತಪ್ಪಾಗಿ ತಿಳಿದಿದ್ದ.

ತನಗೆ ಕೊರೊನಾ ವೈರಸ್ ಇದೇ ಹಾಗಾಗಿ ಯಾರೂ ತನ್ನ ಬಳಿ ಬರಬಾರದು ಎಂದು ಊರಿನವರಿಗೆ ಆತ ಹೇಳಿದ್ದ ಎನ್ನಲಾಗಿದೆ. ನಂತರ ತನ್ನಿಂದಾಗಿ ಊರಿಗೆ ವೈರಸ್ ತಗುಲಬಾರದು, ಊರನ್ನು ಕಾಪಾಡಬೇಕು ಎಂದು ತಿಳಿದು ತಾನೇ ಪ್ರಾಣ ತ್ಯಾಗ ಮಾಡಿದ್ದಾನೆ ಎನ್ನಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos