ನಾಮನಿರ್ದೇಶನ ದಲ್ಲಿ ವಿಳಂಬ

ನಾಮನಿರ್ದೇಶನ ದಲ್ಲಿ ವಿಳಂಬ

ಕೊಟ್ಟೂರು: ಉಜ್ಜಿನಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ಕಳದೆರಡು ವರ್ಷದಿಂದಲೂ ಐದು ಜನ ನಾಮನಿರ್ದೇಶನಗೊಂಡಿಲ್ಲ. ಶಾಸಕ ಎನ್. ವೈ. ಗೋಪಾಲಕೃಷ್ಣ ಅವರಿಗೆ ಉಜ್ಜಿನಿ ಸಮುದಾಯ ಆರೋಗ್ಯ ಕೇಂದ್ರ. ಐವರನ್ನು ನಾಮನಿರ್ದೇಶನ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಪ.ಪಂಗಡ. ಪ. ಜಾತಿ. ಹಿಂದುಳಿದ ಅಲ್ಪ ಸಂಖ್ಯಾತ, ಮಹಿಳಾ ಪ್ರತಿನಿಧಿನಿ. ಸಾಮಾನ್ಯ ವರ್ಗ ಸೇರಿ ಐವರನ್ನು ಶಾಸಕ ಎನ್. ವೈ. ಗೋಪಾಲಕೃಷ್ಣ ನಾಮ ನಿರ್ದೇಶನ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಗೋಚರಿಸುತ್ತಿದೆ. ಆರೋಗ್ಯ ರಕ್ಷಾ ಸಮಿತಿಯಲ್ಲಿ ಕೂಡ್ಲಿಗಿಯ ಕೆ. ಮಲ್ಲಣ್ಣ ನಿಧನ ಹೊಂದಿದರೂ ನಾಮ ನಿರ್ದೇಶಕರಾಗಿ ಮುಂದುವರಿದ್ದರಲ್ಲದೆ ಸ್ಥಳಿಯರಲ್ಲದವರೂ ನಾಮನಿರ್ದೇಶಕರಾಗಿದ್ದನ್ನು ಬಹಿರಂಗ ಪಡಿಸಿತ್ತು. ಐವರು ನಾಮನಿರ್ದೇಶಕರನ್ನು ವಜಾಗೊಳಿಸಿ ಶಾಸಕ ಗೋಪಾಲಕೃಷ್ಣ ಅವರಿಗೆ ನಾಮನಿರ್ದೇಶನ ಮಾಡುವಂತೆ ಉಜ್ಜಿನಿ ಸಮುದಾಯ ಆರೋಗ್ಯ ಕೇಂದ್ರ ಕೇಳಿಕೊಂಡಿತ್ತು. ಆದರೂ ಇಲ್ಲಿಯ ತನಕ ನಾಮನಿರ್ದೇಶನ ಮಾಡಿಲ್ಲ.

ಇದರಿಂದ ಸಮುದಾಯ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಕ್ರಿಯಯೋಜನೆ ರೂಪಿಸಲು ಅಗತ್ಯ ಔಷಧ ಖರೀದಿಸಲು ಸಮಸ್ಯೆ ಉಂಟಾಗಿದೆ. ಸಮಿತಿ ಅಧ್ಯಕ್ಷರಾಗಿರುವ ತಾಪಂ ಇಒ ಹೆಚ್. ತಿಮ್ಮಣ್ಣ, ಇತರೆ ಅಧಿಕಾರೇತರ ಸದಸ್ಯರೊಂದಿಗೆ ತಾತ್ಕಾಲಿಕ ಸಭೆ ನಡೆಸಿದರೂ ಕ್ರಿಯಯೋಜನೆ ಪೂರ್ಣವಾಗಿಲ್ಲ. ಶಾಸಕ ಗೋಪಾಲಕೃಷ್ಣ ಐವರನ್ನು ನಾಮನಿರ್ದೇಶನ ಮಾಡುವಲ್ಲಿ ವಿಳಂಬ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos