ದರ್ಶನ್ ಪತ್ನಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಅಮೂಲ್ಯ

ದರ್ಶನ್ ಪತ್ನಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಅಮೂಲ್ಯ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಡದಿ ವಿಜಯಲಕ್ಷ್ಮಿ ಅವರ ಹುಟ್ಟುಹಬ್ಬದ ಪ್ರಯುಕ್ತ ಗೋಲ್ಡನ್ ಗರ್ಲ್ ನಟಿ ಅಮೂಲ್ಯ ಜಗದೀಶ್ ಶುಭಾಶಯ ಕೋರಿದ್ದಾರೆ. ನಟಿ ಅಮೂಲ್ಯ ತಮ್ಮ ಟ್ವೀಟರ್ ಖಾತೆಯಲ್ಲಿ ವಿಜಯಲಕ್ಷ್ಮಿ ಅವರ ಜೊತೆಗಿದ್ದ ಫೋಟೋಗಳನ್ನು ಪೋಸ್ಟ್ ಮಾಡಿ ಶುಭಾಶಯವನ್ನು ತಿಳಿಸಿದ್ದಾರೆ.

“ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು ಅಕ್ಕ. ನೀವು ಯಾವಾಗಲೂ ಸಂತೋಷದಿಂದ ಇರಬೇಕು’ ಎಂದು ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಈ ವರ್ಷ ಅಮೂಲ್ಯರ ಹುಟ್ಟುಹಬ್ಬವನ್ನು ಚಾಲೆಂಜಿಂಗ್​ ಸ್ಟಾರ್​​ ದರ್ಶನ್​​ ಕುಟುಂಬ ಆಚರಿಸಿತು.

ಸದಾ ಟ್ವಿಟ್ಟರ್​​ನಲ್ಲಿ ಆ್ಯಕ್ಟಿವ್​ ಆಗಿರೋ ವಿಜಯಲಕ್ಷ್ಮಿ, ಟ್ವಿಟ್ಟರ್​​ ಮೂಲಕ ಅಮೂಲ್ಯಗೆ ವಿಶ್​​ ಕೂಡ ಮಾಡಿದ್ದರು. ಅಲ್ಲದೇ ಅಮೂಲ್ಯ, ವಿಜಯಲಕ್ಷ್ಮಿ ಮತ್ತು ನಟ ದರ್ಶನ್ ಪಾರ್ಟಿಗಳಲ್ಲಿ ಆಗಾಗ ಭೇಟಿಯಾಗುತ್ತಿರುತ್ತಾರೆ. ಅದರಲ್ಲೂ ಅಮೂಲ್ಯ ಮತ್ತು ವಿಜಯಲಕ್ಷ್ಮಿ ಅವರು ಆತ್ಮೀಯರಾಗಿದ್ದು, ಅಮೂಲ್ಯ ಯಾವಾಗಲೂ ಅವರನ್ನು ಅಕ್ಕ ಎಂದು ಕರೆಯುತ್ತಾರೆ. ಇನ್ನು ದರ್ಶನ್​​ ತಮ್ಮ ಪತ್ನಿಗೆ ಏನು ಉಡುಗೊರೆ ಕೊಡ್ತಾರೆ ಅಂತ ಕಾದು ನೋಡಬೇಕು.

ಫ್ರೆಶ್ ನ್ಯೂಸ್

Latest Posts

Featured Videos