ಡಿ ಬಾಸ್ ಕಿರುತೆರೆಗೆ..!?

ಡಿ ಬಾಸ್ ಕಿರುತೆರೆಗೆ..!?

ಬೆಂಗಳೂರು, ಡಿ. 02: ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ರೀತಿಯಲ್ಲಿ ನಟಿಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ನ ಥಿಯೇಟರ್ನ ಹಿರಿತೆರೆಯಲ್ಲಿ ನೋಡ್ತಿದ್ದ ಅವರ ಲಕ್ಷಾಂತರ ಅಭಿಮಾನಿಗಳಿಗೆ ಇನ್ಮೇಲೆ ಕಿರುತೆರೆಯಲ್ಲೂ ನೋಡೋ ಛಾನ್ಸ್ ಸಿಗಲಿದೆ.

ಹೌದು, ಕನ್ನಡದ ಕೆಲ ಸ್ಟಾರ್ ನಟರೆಲ್ಲ ಈಗಾಗಲೇ ಕಿರುತೆರೆಯ ಲೋಕಕ್ಕೆ ಎಂಟ್ರಿ ನೀಡಿದ್ಧಾರೆ. ದರ್ಶನ್ ಮಾತ್ರ ಸಣ್ಣ ಪರದೆಯತ್ತ ಮುಖ ಮಾಡಿರಲಿಲ್ಲ. ಕೆಲ ತಿಂಗಳ ಹಿಂದೆ ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಮತ್ಯಾವ ರೀತಿಯಲ್ಲೂ ಅವರು ಟಿವಿ ಲೋಕಕ್ಕೆ ಬಂದಿಲ್ಲ. ಖಾಸಗಿ ವಾಹಿನಿಯೊಂದರ ಶೋವೊಂದನ್ನು ದರ್ಶನ್ ನಿರೂಪಣೆ ಮಾಡಲಿದ್ದಾರೆ ಎಂಬುದು ಲೇಟೆಸ್ಟ್ ಮಾಹಿತಿ. ಆದರೆ, ಯಾವ ವಾಹಿನಿ? ಯಾವ ಶೋ ಅನ್ನೋದು ಬಹಿರಂಗವಾಗಬೇಕಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.

 

ಫ್ರೆಶ್ ನ್ಯೂಸ್

Latest Posts

Featured Videos