ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 900 ಏರಿಕೆ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 900 ಏರಿಕೆ

ನವದೆಹಲಿ, ಮಾ. 28: ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ನಿನ್ನೆ ಒಂದೇ ದಿನ 128 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಗಿದ್ದವು. ಇಂದು ಸೋಂಕಿತರ ಸಂಖ್ಯೆ 902 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಕೊರೊನಾ ಸೋಂಕಿನಿಂದ ಇದುವರೆಗೆ 19 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ ಚಿಕಿತ್ಸೆ ಪಡೆದು 83 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ದೇಶದಲ್ಲಿ ಹೆಚ್ಚು ಕೊರೊನಾ ಸೋಂಕಿರುವ ಕೇರಳದಲ್ಲಿ 176 ಪ್ರಕರಣಗಳು ದಾಖಲಾಗಿವೆ. 2 ನೇ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು, 162 ಕೇಸ್ ಗಳು ಪತ್ತೆಯಾಗಿವೆ. ಉಳಿದಂತೆ ಕರ್ನಾಟಕ 69, ರಾಜಸ್ಥಾನದಲ್ಲಿ 50, ಉತ್ತರ ಪ್ರದೇಶ 49, ಗುಜರಾತ್ ನಲ್ಲಿ 53 ಕೇಸ್ ಗಳು ಪತ್ತೆಯಾಗಿವೆ.

 

ಫ್ರೆಶ್ ನ್ಯೂಸ್

Latest Posts

Featured Videos